ಹೆಬ್ಬೆಟ್ಟು ಒತ್ತಿ ಭವಿಷ್ಯ ತಿಳಿಯಿರಿ!

WD
ಭಾರತದಲ್ಲಿ ಅನೇಕ ವಿಧದ ಪ್ರಕಾರಗಳಿವೆ. ಹಸ್ತ ಸಾಮುದ್ರಿಕ, ಸಂಖ್ಯಾಶಾಸ್ತ್ರ, ಗ್ರಹಕುಂಡಲಿ ಮುಂತಾದವುಗಳು ಪ್ರಮಖವಾದವುಗಳು. ನೂರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ನಾಡಿ ಜ್ಯೋತಿಷ್ಯ ಕೂಡ ಒಂದು.

ನಂಬಿದರೆ ನಂಬಿ ಬಿಟ್ಟರೆ ಬಿಡಿ ಪಯಣದಲ್ಲಿ ಈ ಬಾರಿ ನಾವು ವೈಧೀಶ್ವರಂ ದೇವಾಲಯಕ್ಕೆ ತಮ್ಮನ್ನು ಕರೆದುಕೊಂಡು ಹೋಗುತ್ತಿದ್ದೇವೆ. ವೈಧೀಶ್ವರಂ ಮಂದಿರದ ವೈಶಿಷ್ಠ್ಯ ಎಂದರೆ ಈ ದೇವಾಲಯದ ಸುತ್ತಲೂ ನೂರಾರು ಕುಟುಂಬಗಳಿವೆ. ಅವುಗಳಿಗೆ ಜ್ಯೋತಿಷ್ಯ ಹೇಳುವುದು ಜೀವಾನಾಧಾರ ವೃತ್ತಿ . ಅಂದ ಮಾತ್ರಕ್ಕೆ ಬೇಕಾ ಬಿಟ್ಟಿ ದುಡ್ಡು ಕೀಳುತ್ತಾರೆ ಎಂದು ತಿಳಿಯಬೇಕಾಗಿಲ್ಲ. ಅವರು ಹೇಳಿದ್ದು ನೂರಕ್ಕೆ ನೂರು ಸರಿಯಾಗಿದ್ದರೆ ಮಾತ್ರ ನೀಡಿದ ಸೇವೆಗೆ ದುಡ್ಡು ತೆಗೆದುಕೊಳ್ಳುತ್ತಾರೆ.

ಇಲ್ಲಿನವರು ನುಡಿಯುವ ಕಣಿ ಪದ್ದತಿಗೆ ನಾಡಿ ಜ್ಯೋತಿಷ್ಯ ಎಂದು ಹೇಳಲಾಗುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ವಾಸವಾಗಿದ್ದ ಅಗಸ್ತ್ಯ ಮಹರ್ಷಿಯು ಈ ಜ್ಯೋತಿಷ್ಯ ಶಾಸ್ತ್ರವನ್ನು ಕಂಡುಹಿಡಿದ. ಈಗಲೂ ಋಷಿಮುನಿಗಳು ಬರೆದಿಟ್ಟಿರುವ ತಾಳೆಗ್ರಂಥಗಳಲ್ಲಿನ ಮಾಹಿತಿಯನ್ನು ಆಧರಿಸಿ ಇಲ್ಲಿನವರು ಹೇಳುತ್ತಾರೆ.

WD
ಹಸ್ತ ಸಾಮುದ್ರಿಕೆಯಲ್ಲಿ ಇರುವಂತೆ ಈ ಪದ್ದತಿಯಲ್ಲಿ ಕೂಡ ಪುರುಷರ ಬಲ ಭಾಗಕ್ಕೆ ಮತ್ತು ಮಹಿಳೆಯರ ಎಡಭಾಗಕ್ಕೆ ಆದ್ಯತೆ ನೀಡಲಾಗುತ್ತದೆ. ಹೆಬ್ಬೆರಳ ಗುರುತು ಮನುಷ್ಯನಿಂದ ಮನುಷ್ಯನಿಗೆ ಬೇರೆ ಇರುತ್ತದೆ ಎನ್ನುವ ವೈಜ್ಞಾನಿಕ ಸಂಶೋಧನೆ ಇಲ್ಲಿಯೂ ಅನ್ವಯವಾಗುತ್ತಿದ್ದು. ಆ ಆಧಾರದ ಮೇಲೆ ತೆಗೆದುಕೊಳ್ಳಲಾಗುವ ಹೆಬ್ಬೆರಳ ಗುರುತು ಬಳಸಿಕೊಂಡು ಅವರ ಇಂದಿನ ವಂಶದ ಚರಿತ್ರೆಯನ್ನು ಬಿಡಿಸಿ ಇಡಲಾಗುತ್ತದೆ. ಭೂತಕಾಲದ ಘಟನೆಗಳನ್ನು ಹೇಳಿದ ನಂತರ ನಾಡಿ ಜ್ಯೋತಿಷ್ಯ ಶಾಸ್ತ್ರ ಹೇಳುವವರು ಭವಿಷ್ಯದ ಕುರಿತು ವಿವರ ನೀಡುತ್ತಾರೆ.ಇದರಲ್ಲಿ ಇನ್ನಷ್ಟು ಓದಿ :  

ನೀವು ನಂಬುವಿರಾ

ಅಶ್ವತ್ಥಾಮ ಇನ್ನೂ ಬದುಕಿದ್ದಾನೆಯೇ?

ಅಸೀರಗಢದ ಕೋಟೆ... ಇದು ನಿಗೂಢತೆಗಳ ಮತ್ತು ರಹಸ್ಯಗಳನ್ನು ಒಡಲಲ್ಲಿ ಇರಿಸಿಕೊಂಡ ಕೋಟೆ. ಇದರಲ್ಲಿರುವ ...

ನಾಯಿ ಕಡಿತಕ್ಕೆ ಚರಂಡಿ ಸ್ನಾನ ಮದ್ದು!

ಆಹಾ ! ಜಗತ್ತಿನಲ್ಲಿ ಇನ್ನೂ ಎಂತೆಂತಹ ಪರಿಹಾರಗಳನ್ನು ಮನುಷ್ಯ ಶೋಧಿಸುತ್ತಾನೆ ಎಂದರೆ ಲೆಕ್ಕವಿಲ್ಲ.

ಜೀವ ಬಲಿ ತೆಗೆದುಕೊಂಡ ಕುರುಡು ನಂಬಿಕೆ

ನಂಬಿಕೆ ಅಪನಂಬಿಕೆಗಳೇ ಮನುಷ್ಯನ ಜೀವಾಳ. ಎಂಥಾ ವಿಚಿತ್ರ ನೋಡಿ, ನಂಬುವುದಕ್ಕೂ ಒಂದು ಮಿತಿ ಬೇಡವೆ?

ಮುಟ್ಟಿದರೆ ರೋಗ ಉಪಶಮನ!

ಆದರೆ ಇಲ್ಲಿ ಸರ್ವ ಸಂಗ ಪರಿತ್ಯಾಗಿ "ಲೋಕ ಕಲ್ಯಾಣಾರ್ಥಂ ಇದಂ ಶರೀರಂ" ಎಂದು ತನ್ನ ಬಳಿ ಬರುವ ರೋಗಿಗಳನ್ನು ...