ಬೆಂಗಳೂರು: ಇಂದು ಶ್ರೀರಾಮ ನವಮಿ. ಶ್ರೀರಾಮಚಂದ್ರನ ಜನ್ಮದಿನ. ಈ ಶುಭ ಸಂದರ್ಭಕ್ಕೆ ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ದೇಶದಾದ್ಯಂತ ರಾಮ ನವಮಿ ಆಚರಿಸಲಾಗುತ್ತಿದೆ. ದೇವಾಲಯಗಳಲ್ಲಿ ಪಾನಕ, ಕೋಸಂಬರಿ ಪ್ರಸಾದ ಹಂಚಲಾಗುತ್ತಿದೆ. ಅಂತೂ ದೇವಾಲಯಗಳಲ್ಲಿ, ಮನೆ ಮನೆಗಳಲ್ಲಿ ಭಕ್ತಿಯಿಂದ ರಾಮ ನಾಮ ಜಪ ಮಾಡಲಾಗುತ್ತದೆ. ದಶರಥ ಪುತ್ರ ಶ್ರೀರಾಮಚಂದ್ರ ಹುಟ್ಟಿದ್ದು ಚೈತ್ರ ಮಾಸ, ನವಮಿ ತಿಥಿ, ಶುಕ್ಲ ಪಕ್ಷದಂದು. ಶ್ರೀರಾಮಚಂದ್ರ ಹುಟ್ಟಿದ್ದು, ಮಧ್ಯಾಹ್ನದ ವೇಳೆ ಎಂಬ ನಂಬಿಕೆ. ಇದಕ್ಕಾಗಿ