ಬೆಂಗಳೂರು: ಇಂದು ನಾಡಿನೆಲ್ಲೆಡೆ ಭಕ್ತಿಯಿಂದ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ರಾಮ ಬಂಟ ಹನುಮನ ಜನನ ಹೇಗಾಯ್ತು ಎಂಬ ಕತೆ ಗೊತ್ತಿಲ್ಲದೇ ಇದ್ದರೆ ಇದನ್ನು ಓದಿ.ಅಂಗಿರ ಎಂಬ ಮುನಿ ಒಮ್ಮೆ ಇಂದ್ರ ದೇವನ ಆಸ್ಥಾನಕ್ಕೆ ಬರುತ್ತಾನೆ. ತನ್ನ ಆಸ್ಥಾನಕ್ಕೆ ಬಂದ ಮುನಿಗೆ ಇಂದ್ರ ಪುಂಜಿಕ್ಸತಲ ಎಂಬ ನೃತ್ಯಗಾತಿಯಿಂದ ನೃತ್ಯ ಮಾಡಿಸಿ ಸಂತೋಷ ಪಡಿಸಲು ಯತ್ನಿಸುತ್ತಾನೆ. ಆದರೆ ಇದರ ಬಗ್ಗೆ ಆಸಕ್ತಿಯೇ ಇರದ ಅಂಗಿರ ಮುನಿ ನೃತ್ಯದ ಬಗ್ಗೆ ಏನೂ ಹೇಳದೇ ಮೌನವಾಗಿದ್ದಾಗ