ಬೆಂಗಳೂರು: ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ, ದೇಹ, ಮನಸ್ಸು ಶುದ್ಧಿಯಾಗಿರಬೇಕು. ದಶವಿಧದಲ್ಲಿ ಮಡಿಯಾಗಿ ಪ್ರಾರ್ಥನೆ ಮಾಡಿದರೆ ಭಗವತ್ಕೃಪೆಗೆ ಪಾತ್ರರಾಗಬಹುದು. ಅವು ಯಾವುವು ನೋಡೋಣ. ಶರೀರವನ್ನು ನೀರು ಮತ್ತು ಯೋಗದಿಂದ ಮಡಿ ಮಾಡಿ ಉಸಿರನ್ನು ಪ್ರಾಣಾಯಾಮದಿಂದ ಮಡಿ ಮಾಡಿ ಮನಸ್ಸನ್ನು ಧ್ಯಾನದಿಂದ ಮಡಿ ಮಾಡಿ ನೆನಪುಗಳನ್ನು ಮನನ, ಸಚ್ಛಿಂತನೆಗಳಿಂದ ಮಡಿ ಮಾಡಿ ಅಹಂಕಾರಗಳನ್ನು ಸೇವೆಯಿಂದ ಮಡಿ ಮಾಡಿ ಆತ್ಮವನ್ನು ಮೌನದಿಂದ ಮಡಿ ಮಾಡಿ ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ