ಬೆಂಗಳೂರು: ಇಂದು ಎಲ್ಲೆಡೆ ತುಳಸಿ ಹಬ್ಬದ ಸಂಭ್ರಮ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿಯ ನಂತರ ಬರುವ ಹಬ್ಬ ತುಳಸಿ ಹಬ್ಬ. ಇದರ ವಿಶೇಷತೆ ಏನೆಂದು ನೋಡೋಣ.ಉತ್ಥಾನ ದ್ವಾದಶಿ ಎಂದೂ ಈ ಹಬ್ಬವನ್ನು ಕರೆಯುತ್ತಾರೆ. ಇದು ಹೆಂಗಳೆಯರ ಹಬ್ಬ ಎಂದರೂ ತಪ್ಪಾಗಲಾರದು. ಉತ್ಥಾನ ಎಂದರೆ ಏಳು, ಎಚ್ಚರಗೊಳ್ಳು ಎಂದು ಅರ್ಥ. ಚಾತುರ್ಮಾಸದ ಕಡೆಯ ದಿನವಾದ ಇದು ವಿಷ್ಣುವನ್ನು ಜಾಗೃತಗೊಳಿಸುವ ದಿನ.ಉತ್ಥಾನ ದ್ವಾದಶಿಯ ಅರ್ಥ ಶಂಖಾಸುರನೆಂಬ ರಾಕ್ಷಸನನ್ನು ಕೊಂದ ವಿಷ್ಣುವು ಆಯಾಸದ ಪರಿಹಾರಕ್ಕೋಸ್ಕರ