ಶಂಖ ತೀರ್ಥ ಎಷ್ಟು ಪವಿತ್ರ ಎನ್ನುವುದು ನಿಮಗೆ ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 1 ಜನವರಿ 2019 (09:36 IST)
ಬೆಂಗಳೂರು: ಶಂಖದಿಂದ ಬಂದರೇ ತೀರ್ಥ ಎನ್ನುವ ಗಾದೆ ಮಾತಿದೆ. ಶಂಖದಲ್ಲಿರುವ ನೀರು ಅಷ್ಟು ಪವಿತ್ರ ಎನ್ನಲಾಗುತ್ತದೆ. ಹಾಗಾದರೆ ಶಂಖದಲ್ಲಿರುವ ನೀರಿನ ಮಹತ್ವವೇನು ತಿಳಿದುಕೊಳ್ಳೋಣ.
 
ಶಂಖದಲ್ಲಿ ಸುಮಾರು 10 ಗಂಟೆ ಕಾಲ ನೀರು ಇಟ್ಟರೆ ಇದರಿಂದ ಹಲವು ಆರೋಗ್ಯ ಲಾಭಗಳೂ ಇವೆ. ಇದು ಹೊಟ್ಟೆ ನೋವು, ತಲೆ ನೋವು, ಚರ್ಮ ಸಂಬಂಧಿ ಸಮಸ್ಯೆಗೆ ಪರಿಹಾರ ನೀಡುತ್ತದೆ.
 
ಇದರ ಜೊತೆ ದೇವರ ಕಲ್ಲಿನ ಪ್ರತಿಮೆ ಅಥವಾ ಪಂಚಲೋಹ ವಿಗ್ರಹದ ಮೇಲೆ ಅಭಿಷೇಕ ಮಾಡಿದ ನೀರನ್ನೂ ಸಹ ತೀರ್ಥಕ್ಕೆ ಸೇರಿಸುವುದರಿಂದ ಪ್ರತಿಮೆಯಲ್ಲಿನ ಅನೇಕ ಸಕರಾತ್ಮಕ ಅಂಶಗಳು ತೀರ್ಥದೊಂದಿಗೆ ಸೇರುತ್ತವೆ. ತುಳಸಿ, ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿರುವ ನೀರು, ಶಂಖದ ನೀರು, ದೇವರ ವಿಗ್ರಹದ ನೀರು, ಎಲ್ಲವುದರ ಸಮ್ಮಿಶ್ರಣವೇ ತೀರ್ಥ. ಹೀಗಾಗಿ ಇದು ನಂಬಿಕೆಯ ಜತೆಗೆ ಔಷಧಿಯೂ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :