ಬೆಂಗಳೂರು: ಬೆಂಗಳೂರಿನಿಂದ ಅತ್ತಿಬೆಲೆ ಗಡಿ ದಾಟಿ ತಮಿಳುನಾಡು ಕಡೆಗೆ ಸಾಗುವಾಗ ಹೆದ್ದಾರಿಗಿಂತ ಕೊಂಚ ಪಕ್ಕದಲ್ಲೇ ಚಂದ್ರಚೂಡೇಶ್ವರ ದೇವಾಲಯ ಸಿಗುತ್ತದೆ. ಪುರಾತನವಾದ ಈ ದೇವಾಲಯ ಇರುವುದು ಹೊಸೂರು ಬಳಿ, ತಮಿಳುನಾಡಿನ ಕೃಷ್ಣಗಿರಿ ತಾಲೂಕಿನಲ್ಲಿ. ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ದೇವಾಲಯ ಇದಾಗಿದೆ.ಬೆಟ್ಟವೇರಿ ಸಾಗಿದರೆ ಶಿವ ದೇಗುಲ ಸಿಗುತ್ತದೆ. ಹೊಯ್ಸಳರ ಕಾಲದಲ್ಲೇ ಈ ದೇವಾಲಯ ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ. ಅತ್ಯಂತ ಪುರಾತನವಾದ ಈ ದೇವಾಲಯ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣಗೊಂಡಿದೆ. ಗರ್ಭಗುಡಿಯಲ್ಲಿ