ಬೆಂಗಳೂರು: ಪ್ರತಿ ನಿತ್ಯ ಸ್ನಾನ ಮಾಡುವ ರೂಢಿ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ದಿನಕ್ಕೊಮ್ಮೆಯಾದರೂ ಚೆನ್ನಾಗಿ ಸ್ನಾನ ಮಾಡಿಕೊಳ್ಳುವುದು ಆರೋಗ್ಯವಂತರ ಲಕ್ಷಣ. ಆದರೆ ಯಾವ ಹೊತ್ತಿನಲ್ಲಿ ಸ್ನಾನ ಮಾಡಿದರೆ ಏನು ಫಲ? ಇಲ್ಲಿ ನೋಡಿ.ಬೆಳಗಿನ ಸ್ನಾನ ಎಲ್ಲಕ್ಕಿಂತ ಉತ್ತಮ ಎಂದು ನಂಬಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ನಿತ್ಯ ಕರ್ಮಾದಿಗಳನ್ನು ಮುಗಿಸಿಕೊಂಡು ಸ್ನಾನ ಮಾಡಬೇಕು. ಅದರಲ್ಲೂ ಬೆಳಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲೇ ಮಾಡುವ ಸ್ನಾನವನ್ನು ಮುನಿ ಸ್ನಾನ ಎನ್ನಲಾಗುತ್ತದೆ. ಇದು ಅತ್ಯಂತ ಶ್ರೇಷ್ಠವಾದುದು.