ಸಾಂಪ್ರದಾಯಿಕ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ವರ್ಜ್ಯ. ಯಾಕೆ?ಮನೆಯಲ್ಲಿ ಹಬ್ಬ-ಹರಿದಿನ, ಪೂಜೆ, ಹವನ ಮುಂತಾದ ದೇವತಾಕಾರ್ಯಗಳಿರುವಾಗ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಅದಕ್ಕೊಂದು ಪೌರಾಣಿಕ ಹಿನ್ನಲೆಯಿದೆ.ಸಮುದ್ರ ಮಥನದ ನಂತರ ಮೋಹಿನಿಯ ವೇಷ ಧರಿಸಿ ವಿಷ್ಣು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ. ಅದನ್ನು ಅರಿತ ರಾಹು ಕೇತುವೆಂಬ ರಾಕ್ಷಸರು ಅಮೃತವನ್ನು ಸ್ವೀಕರಿಸಲು ಬರುತ್ತಾರೆ. ಪ್ರಮಾದದಿಂದ ವಿಷ್ಣು ಅವರಿಗೂ ಅಮೃತ ಹಂಚುತ್ತಾನೆ. ತಕ್ಷಣದಲ್ಲೇ ಸೂರ್ಯ ಹಾಗೂ ಚಂದ್ರರು ಮಹಾವಿಷ್ಣುವಿಗೆ ಮಾಹಿತಿ ನೀಡುತ್ತಾರೆ.ಅಷ್ಟರಲ್ಲಿ ಅವರಿಬ್ಬರಿಗೂ ಅಮೃತ ಕುಡಿದಾಗಿರುತ್ತದೆ.