ಬೆಂಗಳೂರು: ಯಾವುದೇ ಮಂಗಳಕಾರ್ಯವಿರಲಿ, ಹಬ್ಬ ಹರಿದಿನಗಳಿರಲಿ, ಮನೆಯ ಎದುರು ಮಾವಿನ ತೋರಣ ಕಟ್ಟುವ ಸಂಪ್ರದಾಯ ನಮ್ಮಲ್ಲಿ ಹಿಂದಿನಿಂದಲೂ ಬೆಳೆದು ಬಂದಿದೆ. ಹಿಂದೆಲ್ಲಾ ಈಗಿನಂತೆ ಮನೆ ಅಲಂಕಾರ ಮಾಡುವುದಕ್ಕೆ ದುಡ್ಡು ಕೊಟ್ಟು ರಾಶಿ, ರಾಶಿ ಹೂವು ತರುವವರು ಯಾರೂ ಇಲ್ಲ. ಆಗ ಮನೆಯ ಹಿತ್ತಲಲ್ಲಿರುವ ಮಾವಿನ ಮರವೇ ಶೃಂಗಾರ ಸಾಧನ. ಕಾರ್ಯಕ್ರಮ ಅಂದವಾಗಿ ಕಾಣಲಿ, ಮನೆ ಶೃಂಗಾರಗೊಳ್ಳಲಿ ಎಂಬ ಕಾರಣಕ್ಕೆ ಕಟ್ಟುತ್ತಿದ್ದರು.ಮಾವಿನ ಸೊಪ್ಪಿಗೆ ವಿಶೇಷ ಗುಣವಿದೆ. ಇದನ್ನು ಮನೆಯ ಎದುರು