ಪೂಜಾ ಸಮಾನುಗಳನ್ನು ಶುಕ್ರವಾರ ತೊಳೆದರೆ ಏನಾಗುತ್ತದೆ ಗೊತ್ತಾ?!

ಬೆಂಗಳೂರು| Krishnaveni K| Last Modified ಶುಕ್ರವಾರ, 28 ಡಿಸೆಂಬರ್ 2018 (08:44 IST)
ಬೆಂಗಳೂರು: ಮನೆಯಲ್ಲಿ ಹಿರಿಯರಿದ್ದರೆ ಶುಕ್ರವಾರ ದಿನ ಪೂಜೆ ಸಾಮಾನುಗಳು ತೊಳೆಯಲು ಬಿಡುವುದಿಲ್ಲ. ಯಾಕೆ ಗೊತ್ತಾ?
 
ಶುಕ್ರವಾರ ದೇವಿಯ ವಾರ ಎಂಬುದು ನಂಬಿಕೆ. ಈ ದಿನ ಪೂಜೆ ಸಾಮಾನುಗಳನ್ನು ತೊಳೆಯುವುದರಿಂದ ಮನೆಯಲ್ಲಿ ಲಕ್ಷ್ಮೀ ದೇವಿ ಹೊರಟು ಹೋಗುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಶುಕ್ರವಾರ, ಅದೇ ರೀತಿ ಮಂಗಳವಾರವೂ ಪೂಜಾ ಸಾಮಾನುಗಳನ್ನು ತೊಳೆಯುವುದು ಅಷ್ಟು ಒಳ್ಳೆಯದಲ್ಲ.
 
ಗುರುವಾರ ಪೂಜಾ ಸಾಮಗ್ರಿಗಗಳನ್ನು ತೊಳೆದುಕೊಳ್ಳಲು ಅಡ್ಡಿಯಿಲ್ಲ. ಗುರುವಾರ ಪೂಜಾ ಸಾಮಗ್ರಿಗಳನ್ನು ಶುಚಿಗೊಳಿಸಿಟ್ಟುಕೊಂಡು ಶುಕ್ರವಾರ ಭಕ್ತಿಯಿಂದ ಪೂಜೆ ಮಾಡಿದರೆ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :