ಬೆಂಗಳೂರು: ದಿನಕ್ಕೆ ಅಂತ್ಯ ಹಾಡುವ ವೇಳೆ ಸಾಯಂಕಾಲ. ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ದೈನಂದಿನ ಕೆಲಸಕ್ಕೆ ಕೊನೆ ಬೀಳುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಸಂಧ್ಯಾವಂದನೆ ಮಾಡುವುದು ನಮ್ಮ ರೂಢಿ. ಯಾಕೆ ಹೀಗೆ ಮಾಡಬೇಕು? ಸಂಧ್ಯಾಕಾಲ ಕ್ಷುದ್ರ ಶಕ್ತಿಗಳು ಒಡಾಡುವ ಸಮಯ. ಈ ಕಾಲದಲ್ಲಿ ಅಸುರ ಶಕ್ತಿಗಳದ್ದೇ ಕಾರುಬಾರಂತೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು, ಗರ್ಭಿಣಿಯರನ್ನು ಹೊರಗೆ ಕರೆದೊಯ್ಯಬಾರದು, ನಿದ್ರಿಸುತ್ತಿರಬಾರದು ಎಂಬ ನಂಬಿಕೆ.ಈ ವೇಳೆ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪ್ರಭಾವ