ಹಿಂದೂ ಧರ್ಮ ಹಾಗೂ ವಾಸ್ತು ಶಾಸ್ತ್ರದಲ್ಲಿ ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ ಅಥವಾ ಕಸಬರಿಕೆಗೆ ಅತ್ಯಂತ ವಿಶೇಷವಾದ ಸ್ಥಾನ ನೀಡಲಾಗಿದೆ. ಪೊರಕೆಯನ್ನು ಕೇವಲ ಕಸ ಗುಡಿಸುವ ಸಾಧನವಾಗಿ ಮಾತ್ರವಲ್ಲದೆ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊರಕೆಗೆ ಸಂಬಂಧಿಸಿದಂತೆ ನಮ್ಮ ಹಿರಿಯರು ಕೆಲವು ಕಟ್ಟುನಿಟ್ಟಾದ ನಿಯಮಗಳು ಮತ್ತು ನಂಬಿಕೆಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಅದರಲ್ಲೂ ರಾತ್ರಿ ಸಮಯದಲ್ಲಿ ಮನೆಗೆ ಕಸಬರಿಕೆ ತರಬಾರದು ಮತ್ತು ರಾತ್ರಿ ಕಸ ಗುಡಿಸಬಾರದು