WD ಕನಸುಗಳೆಲ್ಲವೂ ಕಾಲ್ಪನಿಕವಾಗಿದ್ದು, ನಿಜ ಜೀವನಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದು ಸಾಮಾನ್ಯರ ನಂಬಿಕೆ. ಒಂದು ಸಣ್ಣ ಕನಸು, ಒಬ್ಬಾತನ ಜೀವನವನ್ನೇ ಬದಲಾಯಿ ಸಬಹುದು ಎಂಬುದನ್ನು ನೀವು ನಂಬುತ್ತೀರಾ? ಇಲ್ಲ ಅಲ್ಲವೇ ? ಹಾಗಿದ್ದರೆ, ಈ ಬಾರಿ ನಮ್ಮ ನೀವು ನಂಬುವಿರಾ ಸರಣಿಯಲ್ಲಿ, ನಾವು ನಿಮ್ಮನ್ನು ಈ ರೀತಿಯ ಪವಾಡ ನಡೆದ ಮಧ್ಯಪ್ರದೇಶದ ಮನಾಸಾ ಎಂಬ ಪುಟ್ಟ ಹಳ್ಳಿಗೆ ಕರೆದೊಯ್ಯುತ್ತಿದ್ದೇವೆ.ಬಬಿತಾ ಎಂಬ ಬಾಲಕಿ ಹುಟ್ಟಿದಾಗಲೇ ಕೈಗಳು ಮತ್ತು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಳು.