ನಮ್ಮ ಪವಿತ್ರ ಭೂಮಿ ಭಾರತದಲ್ಲಿ ಪುಣ್ಯ ಕ್ಷೇತ್ರಗಳಿಗೇನೂ ಕೊರತೆಯಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ, ಆ ಸ್ಥಳದೊಂದಿಗೆ ಪವಿತ್ರ ಕಥಾನಕವೊಂದು ಥಳುಕು ಹಾಕಿಕೊಂಡೇ ಇರುತ್ತದೆ. ಇತಿಹಾಸ ಕಾಲದಿಂದಲೂ ಅಸ್ತಿತ್ವದಲ್ಲಿರುವ ನಮ್ಮ ಪ್ರಖ್ಯಾತ ಪಟ್ಟಣಗಳೆಲ್ಲವೂ, ಅದು ಮಸೀದಿಯಿರಲಿ, ಮಂದಿರವಿರಲಿ, ದರ್ಗಾ ಅಥವಾ ಚರ್ಚ್ ಇರಲಿ, ಇಲ್ಲವೇ ಬೌದ್ಧ ವಿಹಾರ ಯಾ ಜೈನ ಮಂದಿರ... ಹೀಗೆ ಒಂದಿಲ್ಲೊಂದು ಪವಿತ್ರ ಕ್ಷೇತ್ರದ ಸುತ್ತಮುತ್ತ ವ್ಯಾಪಿಸಿಕೊಂಡಿರುತ್ತದೆ. ಇದೇ ಕಾರಣಕ್ಕೆ ನಮ್ಮ ದೇಶವೊಂದು ಪುಣ್ಯ ಭೂಮಿ ಎಂದೇ