ಈ ಬಾರಿಯ ನೀವು ನಂಬುವಿರಾ ಮಾಲಿಕೆಯ ಕಥಾನಕ ತೀರಾ ಅಪರೂಪದ್ದು. ಇದುವರೆಗೆ ಚಿತ್ರ-ವಿಚಿತ್ರ ಸಂಗತಿಗಳನ್ನು ನಾವು ಹೇಳಿದ್ದರೆ, ಈ ಬಾರಿ ನೀವು ತಿಳಿಯಲಿರುವುದು ವಿಶಿಷ್ಟವಾದ ಪ್ರಾಣಿ-ಪ್ರೀತಿಯ ಬಗ್ಗೆ.ಜನರಿಗೆ ತಮ್ಮ ಸಾಕುಪ್ರಾಣಿಗಳ ಮೇಲೆ ಅತೀವ ಪ್ರೀತಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮಾನವ ಮತ್ತು ಪ್ರಾಣಿಗಳು ಸಾವಿರಾರು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದವರು. ಆದರೆ, ಕೆಲವೊಮ್ಮೆ ಈ ಪ್ರೀತಿಯು ಉಚ್ಛ್ರಾಯ ಸ್ಥಿತಿ ತಲುಪಿದಾಗ, ಅವುಗಳನ್ನು ಪ್ರದರ್ಶಿಸಲು ಜನರು ವಿಚಿತ್ರ ಚಟುವಟಿಕೆಯಲ್ಲಿ ತೊಡಗುತ್ತಾರೆ ಮತ್ತು