WDWD ಭಕ್ತರ ಕಲ್ಯಾಣಕ್ಕಾಗಿ ದೇವರು ಪ್ರತ್ಯಕ್ಷನಾಗುವನೇ? ಮೂರ್ತಿಯೊಂದು ಮಾನವನಂತೆಯೇ ಬೆಳೆಯುವುದು ಸಾಧ್ಯವೇ? ಈ ರೀತಿಯ ಪವಾಡಗಳು ನಿಜ ಜೀವನದಲ್ಲಿ ಸಂಭವಿಸುತ್ತವೆಯೇ? ಇಂಥ ಪ್ರಶ್ನೆಗಳಿಗೆ ಯಾರಲ್ಲೂ ಉತ್ತರ ಇಲ್ಲ. ಆದರೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಅಲೌಕಿಕ ಅಚ್ಚರಿಗಳನ್ನು ನೋಡಿರುತ್ತಾರೆ. ಕೆಲವೊಮ್ಮೆ ಜನರು ಮರದಲ್ಲಿ ದೇವರನ್ನು ಕಾಣುತ್ತಾರೆ, ಮತ್ತೆ ಕೆಲವರು ತಮ್ಮ ಕಣ್ಣೆದುರೇ ಪ್ರಸಾದವು ಮಾಯವಾದ ಘಟನೆಯನ್ನು ಕೂಡ ಕಂಡವರಿದ್ದಾರೆ. ಈ ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ, ತನ್ನ ಪವಾಡಕ್ಕಾಗಿ