ಆಗ್ರಾದ ತಾಜ್ ಮಹಲ್ ಪ್ರೀತಿಯ ಸಂಕೇತ. ಮೊಘಲ್ ಚಕ್ರವರ್ತಿ ಶಹಜಹಾನ್ ಮತ್ತು ಬೇಗಂ ಮುಮ್ತಾಜ್ ಜಗತ್ತಿಗೇ ಪ್ರೇಮ ಸಂದೇಶ ಸಾರಿದ ಸ್ಥಳವಿದು. ಆದರೆ, ತಾಜ್ ಮಹಲ್ ಕಟ್ಟಿಸುವ ಮೊದಲು, ಮುಮ್ತಾಜ್ಳ ಮೃತದೇಹವನ್ನು ಇರಿಸಿದ್ದು ಬುರ್ಹಾನ್ಪುರದ ಬುಲಾರಾ ಮಹಲ್ನಲ್ಲಿ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಆ ಅರಮನೆಯಲ್ಲಿ ಮುಮ್ತಾಜ್ಳ ಆತ್ಮ ಇನ್ನೂ ತಿರುಗಾಡುತ್ತಿದೆ ಎಂದು ನಂಬಿದ್ದಾರೆ ಜನ.400 ವರ್ಷಗಳ ಹಿಂದೆ ಮೊಘಲ್ ರಾಣಿ ಮುಮ್ತಾಜ್, ಬುಲಾರಾ ಮಹಲಿನಲ್ಲಿ ತೀರಿಕೊಂಡಾಗ ಆಕೆಯ ಸ್ಮರಣಾರ್ಥವಾಗಿ ಒಂದು