WD ಈ ಬಾರಿಯ ನಮ್ಮ ನಂಬಿಕೆ ಮತ್ತು ಅಪನಂಬಿಕೆಗಳ ಪಯಣದಲ್ಲಿ ಕಳೆದ ಬಾರಿ ಗಂಧರ್ವ ಸೇನ ಮಂದಿರವನ್ನು ಪರಿಚಯಿಸಿದಂತೆ ಅದೇ ಪ್ರದೇಶದಲ್ಲಿ ಇರುವ ಗಂಧರ್ವಪುರಿಯ ಶಾಪದ ಕುರಿತು ಪರಿಚಯಿಸುತ್ತಿದ್ದೇವೆ. ಕೇವಲ ಓರ್ವ ಗಂಧರ್ವನ ಶಾಪದ ಫಲವಾಗಿ ಕಲ್ಲಾಗಿ ಈ ಊರು ಪರಿವರ್ತನೆಗೊಂಡಿದೆ ಎಂದರೆ ನಂಬುತ್ತಿರಾ? ಅದು ನಿಮಗೆ ಬಿಟ್ಟದ್ದು.ಮಧ್ಯ ಪ್ರದೇಶದ ದೇವಾಸ್ನ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವು ಈ ಊರಿನ ಹೆಸರು ಗಂಧರ್ವಪುರಿ. ಬೌದ್ಧ ಉನ್ನತಿ ಅವನತಿಗಳನ್ನು ಕಂಡ ಊರು ಇದು.