Widgets Magazine

ಅರ್ಹ ಬ್ರಹ್ಮಚಾರಿ ಎಂದರೆ ಮೋದಿ: ಮಲ್ಲಿಕಾ ಹೇಳಿಕೆ

ಮುಂಬೈ : | ವೆಬ್‌ದುನಿಯಾ|
ಮಲ್ಲಿಕಾ ಶೆರಾವತ್ ಇತ್ತೀಚೆಗೆ ರಿಯಾಲಿಟಿ ಶೋ ಒಂದರ ಟ್ರೇಲರ್ನಲ್ಲಿ ನೀಡಿರುವ ಹೇಳಿಕೆ ದೇಶದಾದ್ಯಂತ ಚರ್ಚೆಗೊಳಗಾಗಿದೆ. 62 ವರ್ಷದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಅರ್ಹ ಬ್ರಹ್ಮಚಾರಿ ಎಂದು ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದ ಯೋಗ್ಯ ಅವಿವಾಹಿತ ಯಾರೆಂದು ಕೇಳಿದ ಪ್ರಶ್ನೆಗೆ ಮಲ್ಲಿಕಾ ನೀಡಿದ ಉತ್ತರ ನರೇಂದ್ರ ಮೋದಿ ಎಂದು. ಆ ಕುರಿತಾಗಿ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಶೆರಾವತ್ ತಮ್ಮ ಉತ್ತರವನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಚತುರ, ಪ್ರಗತಿಪರ ವ್ಯಕ್ತಿ ಎಂದೂ ಮಲ್ಲಿಕಾ ಬಣ್ಣಿಸಿದ್ದಾರೆ. ನಾನೂ ಅವಿವಾಹಿತೆ, ಮೋದಿ ಕೂಡಾ ಅವಿವಾಹಿತರು.

ನನ್ನಂತೆಯೇ ಮೋದಿ ಅವರ ಬಗ್ಗೆಯೂ ಸಾಕಷ್ಟು ಅಪಪ್ರಚಾರ ನಡೆಯುತ್ತಿವೆ ಎಂದಿದ್ದಾರೆ ಮಲ್ಲಿಕಾ.
ದಿ ಬ್ಯಾಚುಲರೊಟ್ಟೆ ಇಂಡಿಯಾ-ಮೆರೆ ಖಯಾಲೊನ್ ಕಿ ಮಲ್ಲಿಕಾ ಟಿವಿ ರಿಯಾಲಿಟಿ ಶೋ ಮೂಲಕ ತಮ್ಮ ಸಂಗಾತಿಯನ್ನು ಹುಡುಕುತ್ತಿರುವ ಮಲ್ಲಿಕಾ ಈ ಶೋನ ಟ್ರೇಲರ್ನಲ್ಲಿ ಮೋದಿ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ. ಈ ರಿಯಾಲಿಟಿ ಶೋನಲ್ಲಿ 30 ಸ್ಪರ್ಧಿಗಳು ಇದರಲ್ಲಿ ಭಾಗವಹಿಸುತ್ತಿದ್ದು ಅಲ್ಲಿ ಮಲ್ಲಿಕಾ ತನ್ನ ಸಂಗಾತಿಯನ್ನು ಹುಡುಕಿಕೊಳ್ಳಲಿದ್ದಾರೆ. ನಟ ರೋಹಿತ್ ರಾಯ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಅ.7ರಿಂದ ಈ ಕಾರ್ಯಕ್ರಮ ಲೈಫ್ ಓಕೆ ವಾಹಿನಿಯಲ್ಲಿ ಪ್ರಸಾರವಾಗಲಿದೆ.


ಇದರಲ್ಲಿ ಇನ್ನಷ್ಟು ಓದಿ :