ಐಶ್‌‌ಗೆ ಹೆಣ್ಣು ಮಗುವಂತೆ!

ASHWARYA
PTI
ಮೊನ್ನೆ ಮೊನ್ನೆಯಷ್ಟೆ ಹಸೆ ಮಣೆ ಏರಿರುವ ನವವಿವಾಹಿತೆ ಐಶ್ವರ್ಯಾ ರೈ ಇನ್ನೊಂದು ವರ್ಷದಲ್ಲಿ ಹೆಣ್ಣುಮಗುವಿಗೆ ಜನ್ಮನೀಡಲಿದ್ದಾರೆ ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸ್ವಾಮೀಜಿ ಮುಂದಿನ ವರ್ಷ ಇದೇ ಸಮಯದಲ್ಲಿ ಅಭಿ-ಐಷ್ ದಂಪತಿಗಳಿಗೆ ಮುದ್ದಿನ ಹೆಣ್ಣು ಮಗು ಜನಿಸಲಿದೆ ಎಂದರು.

ಈ ಹಿಂದೆ ಐಶ್-ಅಭಿಮದುವೆಯಾಗಲಿದ್ದಾರೆ ಎಂದು ಘೋಷಿಸಿ ದೇಶದ ಅಸಂಖ್ಯಾತ ಮಾಧ್ಯಮಗಳನ್ನು ಆಕರ್ಷಿಸಿದ್ದ ಸ್ವಾಮೀಜಿ ಇದೀಗ ಈ ಜೋಡಿಯ ಭವಿಷ್ಯದ ಪೀಳಿಗೆಯ ಬಗ್ಗೆ ಪ್ರಕಟಿಸಿ ಮತ್ತೆ ಸುದ್ದಿಯಾಗಿದ್ದಾರೆ.

ಅಂದ ಹಾಗೆ ಜ್ಯೋತಿಷ್ಯ ವಿದ್ವಾನ್ ಚಂದ್ರಶೇಖರ ಸ್ವಾಮೀಜಿ ಅಮಿತಾಭ್ ಬಚ್ಚನ್ ಅವರ ಖಾಯಂ ಜ್ಯೋತಿಷಿ. ಐಶ್- ಅಭಿ ಜಾತಕವನ್ನು ಮೊದಲು ನೋಡಿ, ಕಂಕಣ ಭಾಗ್ಯವನ್ನು ಪ್ರಕಟಿಸಿದ್ದು ಇವರ ವಿಶೇಷತೆ.

ಮುಂಬೈಯಲ್ಲಿ ನಡೆದ ಈ ತಾರಾ ಜೋಡಿಯ ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಬಂದಿದ್ದ ಸ್ವಾಮೀಜಿ ಐಶ್ ಬಗೆಗಿನ ಹೊಸ ನುಡಿದಿದ್ದಾರೆ. ಭವಿಷ್ಯ ನಿಜವಾಗಲು ಇನ್ನೂ ಒಂದು ವರ್ಷ ಕಾಯಬೇಕು.ಇದರಲ್ಲಿ ಇನ್ನಷ್ಟು ಓದಿ :