ಇತ್ತೀಚೆಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಅತ್ಯಂತ ಪ್ರತಿಭಾವಂತ ನಟ ಸೂರ್ಯ ಅಂಜಾನ್ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ ಹರಡಿತ್ತು. ಆ ಚಿತ್ರದಲ್ಲಿ ನಿರ್ದೇಶಕ ಮುರುಗದಾಸ್ ವಿಶೇಷ ಹಾಡಿಗೆ ನಟಿಸಲೆಂದು ಬಾಲಿವುಡ್ ನಟಿ ಕರೀನ ಕಪೂರ್ ಅವರನ್ನು ಕರೆತರುತ್ತಾರೆ. ಈ ಮುಖಾಂತರ ಆಕೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಇದು ತುಂಬಾ ಜೋರಾಗಿ ಎಲ್ಲೆಡೆ ಹರಿದಾಡಿತು. ಆದರೇ, ಅದರ ಬಗ್ಗೆ ಕರೀನ ಕಪೂರ್ ಖಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ತನಗೆ ಸೂರ್ಯ ಯಾರು ಅನ್ನುವುದೇ ಗೊತ್ತಿಲ್ಲ ಎನ್ನುವ ಮಾತನ್ನು ಎಲುಬಿಲ್ಲದ ನಾಲಿಗೆ ಮುಖಾಂತರ ಆಡಿ ತೋರಿದ್ದಳು. ದಕ್ಷಿಣ ಭಾರತದ ಬಗ್ಗೆ ಆಕೆಗೆ ಇರುವ ದೃಷ್ಟಿ ಕೋನ, ಸೂರ್ಯ ಅವರ ಬಗ್ಗೆ ಹೇಳಿದ ಪರಿ ಎಲ್ಲವೂ ಸೂರ್ಯಾಭಿಮಾನಿಗಳಿಗೆ