ಕರೋಡ್‌ಪತಿ ಏಳನೇ ಸೀಸನ್ಗೆ ಏಳು ಕೋಟಿ

ಮುಂಬೈ| ವೆಬ್‌ದುನಿಯಾ|
ಮುಂಬೈ: ಕನ್ನಡದ ಕೋಟ್ಯಾಧಿಪತಿ ಎರಡು ಸೀಸನ್ಗಳನ್ನು ಮುಗಿಸಿದ ಸಂಗತಿ ನಿಮಗೆಲ್ಲಾ ಗೊತ್ತೇ ಇದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೆ ಒಂದು ಕೋಟಿ ರೂಪಾಯಿ ಗೆಲ್ಲುವ ಅವಕಾಶ ಇತ್ತು. ಅದರೊಂದಿಗೆ ನಾಲ್ಕು ಲೈಫ್ಲೈನ್ಗಳನ್ನು ನೀಡಲಾಗಿತ್ತು. ಇದೀಗ ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಏಳನೇ ಸೀಸನ್ ಇದೇ ಸೆ.6ರಿಂದ ಆರಂಭಗೊಳ್ಳಲಿದೆ. ಈ ಬಾರಿಯ ವಿಶೇಷ ಎಂದರೆ ಬಹುಮಾನದ ಮೊತ್ತವನ್ನು ರೂ.7ಕೋಟಿಗೆ ಏರಿಸಲಾಗಿದೆ. ಹಾಗೆಯೇ ನಾಲ್ಕು ಲೈಫ್ಲೈನ್ಗಳ ಬದಲಾಗಿ ಐದನ್ನು ಬಳಸಿಕೊಳ್ಳುವ ಅವಕಾಶ ನೀಡಲಾಗಿದೆ. ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ ಸೆ.6ರಿಂದ ಈ ಸೀಸನ್ ಆರಂಭವಾಗಲಿದೆ.


ಇದರಲ್ಲಿ ಇನ್ನಷ್ಟು ಓದಿ :