ರಜನಿ ಕಾಂತ್ ಅವರು ತಮ್ಮ ವಿಶೇಷ ಗುಣಗಳಿಂದ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ತಮ್ಮ ಚಿತ್ರ ಸೋತರೆ ಅದರ ಹೊಣೆಯನ್ನು ಸಂಪೂರ್ಣವಾಗಿ ತಮ್ಮ ಮೇಲೆ ಹಾಕಿಕೊಂಡು ಆ ಚಿತ್ರತಂಡಕ್ಕೆ ನ್ಯಾಯ ಒದಗಿಸುವ ಮನಸ್ಥಿತಿ ಹೊಂದಿರುವಂತಹ ವ್ಯಕ್ತಿತ್ವ ಅವರದ್ದಾಗಿದೆ.