ನೂರು ಕೋಟಿ ನಾನೆಲ್ಲಿ ಕೇಳಿದೆ? ಸುಸಾನ್ ರೋಶನ್

ಬುಧವಾರ, 1 ಜನವರಿ 2014 (14:21 IST)

PR
PR
ಹೃತಿಕ್ ರೋಶನ್ ಬದುಕಲ್ಲಿ ಆತನ ಹೆಂಡತಿ ಸೂಸಾನ್ ಬಿರುಗಾಳಿ ಆಗಿದ್ದು ಈಗ ಎಲ್ಲರಿಗೂ ತಿಳಿದ ಸಂಗತಿ ಆಗಿದೆ. ಆಕೆ ಮತ್ತು ಹೃತಿಕ್ ಆರು ತಿಂಗಳಿಂದ ಬೇರೆ ಬೇರೆಯಾಗಿ ಬದುಕುತ್ತಿದ್ದ ಸಂಗತಿ ಈಗ ಬಾಲಿವುಡ್ ನಲ್ಲಿ ಎಲ್ಲರಿಗೂ ತಿಳಿದ ರಹಸ್ಯ. ಈಗ ಅವರಿಬ್ಬರೂ ಕೋರ್ಟ್ ಮೆಟ್ಟಲು ಹತ್ತಿದ್ದಾರೆ ತಮ್ಮ ದಾಂಪತ್ಯ ಬದುಕಿಗೆ ಕೊನೆ ಹಾಡಲು. ಇವರ ಬದುಕಿಗೆ ಸಂಬಂಧಿಸಿದಂತೆ ಮೀಡಿಯಾದವರು ದಿನಕ್ಕೊಂದು ಕಥೆ ಹುಟ್ಟಿಸಿ, ಬರೆದು ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ. ಹೃತಿಕ್ ಬಳಿ ಸುಸಾನ್ ನೂರು ಕೋಟಿ ರೂಪಾಯಿಗಳನ್ನು ನೀಡ ಬೇಕು ಎನ್ನುವ ಶರತ್ತನ್ನು ಹಾಕಿದ್ದಾಳೆ ಎನ್ನುವ ಸುದ್ದಿಯನ್ನು ಮುಂದೆ ಮಾಡಿ ಹರಡುವುದರಲ್ಲಿ ಮಾಧ್ಯಮಗಳು ಮಗ್ನವಾಗಿರುವುದಲ್ಲದೇ , ಈ ಎರಡೂ ಕಡೆಯ ವಕೀಲರು ಈ ಬಗ್ಗೆ ಹೆಚ್ಚಿನ ಗಮನನೀಡಿ ವ್ಯವಹಾರ ಕುದುರಿಸಲು ನೋಡುತ್ತಿದ್ದಾರೆ ಎನ್ನುವ ಸುದ್ದಿಯೂ ಸಹ ಹೆಚ್ಚು ಪ್ರಚಾರದಲ್ಲಿ ಇದೆ.

ಇದರಿಂದ ಬೇಸರಗೊಂಡ ಸೂಸಾನ್ ಸುದ್ದಿ ಹರಡುತ್ತಿರುವ ಮೀಡಿಯಾ ಮುಂದೆ ಬಂದು ದಯಮಾಡಿ ಇಲ್ಲಸಲ್ಲದ ವಿಷಯಗಳನ್ನು ಹರಡಬೇಡಿ. ನಾವು ಈಗಾಗಲೇ ಕ್ರಿಟಿಕಲ್ ಕಂಡೀಷನ್ ನಲ್ಲಿ ಇದ್ದೇವೆ. ಈಗ ಇಂತಹ ಊಹೆ- ಕಟ್ಟು ಕಥೆಯ ಸುದ್ದಿಗಳನ್ನು ಬರೆದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸ ಬೇಡಿ, ನಾನ್ಯಾಕೆ ಕೇಳಲಿ ನೂರು ಕೋಟಿ ಎಂದು ಸಿಟ್ಟಾಗಿ ಹೇಳಿದಳಂತೆ! ಮೀಡಿಯದವರ ಮುಂದೆ ದುಃಖ ಹೇಳಿಕೊಂಡರೆ ಏನಾಗುತ್ತೆ? ಸುಸಾನ್ ಗೆ ಇದು ಗೊತ್ತಲ್ಲವೇ?ಇದರಲ್ಲಿ ಇನ್ನಷ್ಟು ಓದಿ :