Widgets Magazine

ನೇಹಾ ಧುಪಿಯಾಗೆ ವ್ಯಾಲೆಂಟೈನ್ಸ್ ಡೇ ಏನೇನೂ ವಿಶೇಷವಿಲ್ಲ

ನವದೆಹಲಿ| ಇಳಯರಾಜ|
ವ್ಯಾಲೆಂಟೈನ್ಸ್ ದಿನಕ್ಕಾಗಿ ಯುವ ಪ್ರೇಮಿಗಳು ಸಂತೋಷ-ಉನ್ಮಾದದಿಂದ ಇಡೀ ಪಟ್ಟಣವನ್ನೇ ಕೆಂಪಗಾಗಿಸಿದ್ದರೆ, ಬಾಲಿವುಡ್ ಗ್ಲ್ಯಾಮರ್ ಹುಡುಗಿ ನೇಹಾ ಧುಪಿಯಾ ಅವರ ಪ್ರಕಾರ, ಈ ಬಗೆಗೆ ಭಾರೀ ಆಚರಣೆ ಮತ್ತು ಪಾರ್ಟಿ ಮಾಡುವುದು... ಇದೆಲ್ಲಾ... ಏನೂ ಅಲ್ಲದುದರ ಬಗೆಗೆ ಹೈಪ್ ಅಷ್ಟೇ.

ವ್ಯಾಲೆಂಟೈನ್ಸ್ ದಿನದ ಬಗ್ಗೆ ನಾನೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ತರುಣ ಜನಾಂಗಕ್ಕೆ ಇದರ ಬಗೆಗಿನ ಭರ್ಜರಿ ಆಚರಣೆ, ಪಾರ್ಟಿ... ಇವೆಲ್ಲಾ ರಂಜನೀಯವಾಗಬಹುದು. ಆದರೆ ವೈಯಕ್ತಿಕವಾಗಿ ಹೇಳಬೇಕಿದ್ದರೆ, ನಮ್ಮ ಪ್ರಿಯಕರ ಅಥವಾ ಪ್ರೇಯಸಿಗೆ 'ನಾ ನಿನ್ನ ಪ್ರೀತಿಸುವೆ' ಅಂತ ಹೇಳೋದಕ್ಕೆ ನಿರ್ದಿಷ್ಟ ದಿನವೇನೂ ಬೇಕಾಗಿಲ್ಲ ಎಂದು ನೇಹಾ ಹೇಳಿದ್ದಾರೆ.

ನಾವೆಷ್ಟು ಅವರನ್ನು ಪ್ರೀತಿಸುತ್ತೇವೆ ಅಂತ ಹೇಳೋದಿಕ್ಕೆ ಇಡೀ ವರ್ಷವೇ ಇದೆ ಎಂದು ತಿಳಿಸಿರುವ ನೇಹಾ, ಕಾಲೇಜು ಜೀವನದ ಸಂದರ್ಭದಲ್ಲೂ ತನಗೆ ಯಾರು ಕೂಡ ವ್ಯಾಲೆಂಟೈನ್ಸ್ ಡೇ ಉಡುಗೊರೆ ಕೊಟ್ಟಿರಲಿಲ್ಲ ಎಂದು ಹೇಳಿದರು.

'ನಾನು ಕಾಲೇಜಲ್ಲಿದ್ದಾಗ, ನನ್ನೆಲ್ಲಾ ಗೆಳತಿಯರಿಗೆ ರಾಶಿ ರಾಶಿ ಕಾರ್ಡುಗಳು, ಗುಲಾಬಿ ಹೂಗಳು ಬರುತ್ತಿದ್ದವು. ವಾಸ್ತವವಾಗಿ ಏನೂ ಸಿಗದಿದ್ದುದು ನನಗೆ ಮಾತ್ರ' ಎಂದಿದ್ದಾರವರು.


ಇದರಲ್ಲಿ ಇನ್ನಷ್ಟು ಓದಿ :