Widgets Magazine

ಪ್ರಿಯಕರ ಹರ್ಮನ್ ಬಗ್ಗೆ ಅಮೃತಾ ಹೊಟ್ಟೆಕಿಚ್ಚು

ಇಳಯರಾಜ| Last Modified ಗುರುವಾರ, 29 ಜನವರಿ 2009 (17:20 IST)
ತೌಳವ ಸುಂದರಿ ಅಮೃತಾ ರಾವ್‌ಗೆ ಹರ್ಮನ್ ಬಾವೇಜಾ ಮೇಲೆ ಹೊಟ್ಟೆಕಿಚ್ಚಂತೆ. ಪ್ರೀತಿ-ಪ್ರೇಮ ಅಂದ್ಮೇಲೆ ಇದೆಲ್ಲ ಮಾಮ‍ೂಲಿ ಅಂತ ತಳ್ಳಿ ಹಾಕಬಹುದಿತ್ತು. ಆದರೆ ಆಕೆ ಹೇಳಿರುವುದು ಅಂತಾರಾಷ್ಟ್ರೀಯ ಕ್ರಿಕೆಟಿಗರ ಜತೆ ತನಗೆ ನಟಿಸಲು ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ. ಹಾಗಾಗಿ ತಪ್ಪರ್ಥ ಮಾಡಿಕೊಂಡು ಎಲ್ಲೆಲ್ಲೋ ಹೋಗಿದ್ದವರು ವಾಪಸ್ ಬನ್ನಿ..!

ಅಮರ ಪ್ರೇಮಿಗಳಂತಿದ್ದ ಹರ್ಮನ್ ಮತ್ತು ಪ್ರಿಯಾಂಕ ಛೋಪ್ರಾ ನಡುವೆ ಹುಳಿ ಹಿಂಡಿ ಲಾಭ ಪಡೆದ ಅಮೃತಾ ಆತನನ್ನು ಮಡಿಲಲ್ಲಿ ಮಲಗಿಸಿಕೊಂಡು 'ಲಾಲಿ' ಹಾಡುತ್ತಿರುವುದು ಇದೀಗ ತುಂಬಾ ಹಳೆ ವಿಷಯ. ಆದರೂ ನಾವಿಬ್ಬರೂ ಕೇವಲ ಫ್ರೆಂಡ್ಸ್ ಎಂದು ಇಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಸೆಟ್‌ನ ಹತ್ತಿರ ಯಾರೂ ಇಲ್ಲದಾಗ ಇವರಿಬ್ಬರ ಮಂಗನಾಟವನ್ನು ನೋಡಿದ ಹಲವರಿಗೆ ಹೊಟ್ಟೆ ಉರಿಯಂತೆ..!

ನಿಮ್ಮ ಮತ್ತು ಪ್ರಿಯಾಂಕ ಛೋಪ್ರಾ ನಡುವಿನ ಸಂಬಂಧ ಮುರಿದು ಬಿದ್ದಿದೆ ಮತ್ತು ನೀವೀಗ ಡೇಟಿಂಗ್ ಮಾಡುತ್ತಿಲ್ಲ ಎಂಬ ಸುದ್ದಿಗಳು ಹರಡುತ್ತಿದೆಯಲ್ಲಾ ಎಂದು ಹರ್ಮನ್ ಮುಂದೆ ಪ್ರಶ್ನೆಯಿಟ್ಟಾಗ, "ನೋಡಿ, ನಾನು ಮತ್ತು ಪ್ರಿಯಾಂಕ ಉತ್ತಮ ಗೆಳೆಯರು. ಅಷ್ಟೇ. ಇದರಲ್ಲಿ ನಮ್ಮ ನಡುವೆ ರೊಮ್ಯಾಂಟಿಕ್ ಮಾತುಗಳೇ ಬರುವುದಿಲ್ಲ" ಎಂದುತ್ತರಿಸಿ ಸುಮ್ಮನಾಗಿದ್ದಾನೆ.

ಅಮೃತಾ ರಾವ್ ಜತೆ ಸಂಬಂಧ ಕುದುರಿಸಿದ್ದೀರಂತೆ ಎಂದು ಮತ್ತೆ ಕೆದಕಿದಾಗ, "ನಾನು ಮತ್ತು ಅಮೃತಾ ಈಗ ಉತ್ತಮ ಫ್ರೆಂಡ್ಸ್ ಆಗಿದ್ದೇವೆ. 'ವಿಕ್ಟರಿ' ಚಿತ್ರೀಕರಣ ಸಂದರ್ಭದಲ್ಲಿ ಈ ಅವಕಾಶ ನಮಗೊದಗಿಗೆ. ಗಾಳಿಸುದ್ದಿಗಳಿಗೆ ಯಾವುದೇ ಆಧಾರವಿರುವುದಿಲ್ಲ. ಚಿತ್ರ ಬಿಡುಗಡೆಯಾಗುವ ಮೊದಲೇ ಇಂತಹ ರೂಮರ್‌ಗಳು ಯಾಕೆ ಹಬ್ಬುತ್ತಿವೆ ಎಂದು ನನಗರ್ಥವಾಗುತ್ತಿಲ್ಲ" ಎಂದು ಬಾಯಿಗೆ ಬೆರಳಿಟ್ಟು ಹರ್ಮನ್ ತಣ್ಣಗಾಗಿದ್ದಾನೆ.

ಆದರೂ ಅಮೃತಾಗೆ ಹರ್ಮನ್ ಮೇಲಿರುವ ಹೊಟ್ಟೆ ಕಿಚ್ಚಿನ ಕಾರಣ 'ವಿಕ್ಟರಿ' ಚಿತ್ರದಲ್ಲಿ ಆಕೆಗೆ ಯಾವುದೇ ಕ್ರಿಕೆಟಿಗರೊಡನೆ ಯಾವುದೇ ದೃಶ್ಯವಿಲ್ಲದಿರುವುದು. ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಎಲ್ಲಾ ದೃಶ್ಯಗಳು ಕೂಡ ಹರ್ಮನ್ ಜತೆಗಿದೆ ಎಂಬುದು ಆಕೆಯ ಮುನಿಸು. ಈ ಚಿತ್ರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರುಗಳಾದ ಅಲ್ಲನ್ ಬಾರ್ಡನ್, ಯ‌ೂಸುಫ್ ಪಠಾಣ್, ಇರ್ಫಾನ್ ಪಠಾಣ್, ಆರ್.ಪಿ. ಸಿಂಗ್, ಇಶಾಂತ್ ಶರ್ಮಾ, ಹರಭಜನ್ ಸಿಂಗ್, ಮೋಹಿಂದರ್ ಅಮರನಾಥ್, ದಿನೇಶ್ ಕಾರ್ತಿಕ್, ಪ್ರವೀಣ್ ಕುಮಾರ್, ಆಶಿಶ್ ನೆಹ್ರಾ, ರಮೇಶ್ ಪೊವಾರ್, ನವಜೋತ್ ಸಿಂಗ್ ಸಿಧು, ಮಣೀಂದರ್ ಸಿಂಗ್, ಮೈಕೆಲ್ ಹಸ್ಸಿ, ಬ್ರೆಟ್ ಲೀ, ಸ್ಟುವರ್ಟ್ ಕ್ಲಾರ್ಕ್, ಸನತ್ ಜಯಸೂರ್ಯ, ದಿಲ್ಹರಾ ಫೆರ್ನಾಂಡೋ, ಕಮ್ರಾನ್ ಅಕ್ಮಲ್, ರಾವ್ ಇಫ್ತಿಕಾರ್, ಮಾರ್ಟಿನ್ ಕ್ರೋವ್, ಬ್ರಾಡ್ ಹಡ್ಡಿನ್, ಬ್ರಾಡ್ ಹಾಗ್, ಡೀನ್ ಜಾನ್ಸ್, ಸೈಮನ್ ಜಾನ್ಸ್, ಫರ್ವೇಜ್ ಮಹರೂಫ್, ಸಾಜಿದ್ ಮಹಮ್ಮದ್, ಶೋಯಿಬ್ ಮಲಿಕ್, ದಿಮಿಟ್ರಿ ಮಸ್ಕರೇನಸ್, ಅಜಂತಾ ಮೆಂಡಿಸ್, ಆಲ್ಬೀ ಮೋರ್ಕೆಲ್, ಮುತ್ತಯ್ಯ ಮುರಳೀಧರನ್, ಆಂಡ್ರ್ಯೂ ನೆಲ್, ಕುಮಾರ ಸಂಗಕ್ಕರ, ಮೈಕೆಲ್ ಸ್ಲಾಟರ್, ಗ್ರೇಮ್ ಸ್ಮಿತ್, ಸೊಹೈಲ್ ತನ್ವೀರ್, ಚಮಿಂಡಾ ವಾಸ್, ಅತುಲ್ ವಾಸನ್, ವಕಾರ್ ಯ‌ೂನಿಸ್ ಮುಂತಾದವರು ಭಾಗವಹಿಸಿದ್ದಾರಂತೆ.

ಹೆಚ್ಚು ಕಡಿಮೆ ಆಸ್ಟ್ರೇಲಿಯಾದಲ್ಲೇ ಚಿತ್ರೀಕರಿಸಲಾಗಿರುವ ಈ ಚಿತ್ರ ಇದೇ ಜನವರಿ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಕ್ರಿಕೆಟ್ ಕಥೆಯಾದ ಕಾರಣ ಹರ್ಮನ್‌ಗೆ ಗೆಲುವು ದಕ್ಕಬಹುದು ಎಂಬುದು ಬಾಲಿವುಡ್ ಪಂಡಿತರ ಲೆಕ್ಕಾಚಾರ. ಮೊದಲ ಚಿತ್ರ 'ಲವ್‌ಸ್ಟೋರಿ 2050' ಫ್ಲಾಪ್ ಆಗಿತ್ತು.
IFMಇದರಲ್ಲಿ ಇನ್ನಷ್ಟು ಓದಿ :