Widgets Magazine

ರಣಬೀರ್‌ಗೆ ದೀಪಿಕಾ ಮತ್ತೊಬ್ಬ ಹುಡುಗಿ ಮಾತ್ರ..!

ಇಳಯರಾಜ|
ದೀಪಿಕಾ ಪಡುಕೋಣೆ ತನ್ನ ಪ್ರಿಯಕರ ರಣಬೀರ್ ಕಪೂರ್ ತೆಕ್ಕೆಯಲ್ಲಿ ಸೇರಿಕೊಂಡಿರುವುದು ಅವಳ ಕೊನೆಯ ನಿಲ್ದಾಣವಲ್ಲ.. ರಣಬೀರ್ ಪಾಲಿಗೆ ಆಕೆ ಮತ್ತೊಬ್ಬಳು ಗೆಳತಿಯಷ್ಟೇ ಎಂಬರ್ಥದ ಮಾತುಗಳನ್ನು ಸ್ವತಃ ರಣಬೀರ್ ತಾಯಿ ನೀತೂ ಸಿಂಗ್ ಹೇಳಿಕೊಂಡಿದ್ದಾರೆ.

ಇದಪ್ಪಾ ಮಾತಂದ್ರೆ..! ನಿಹಾರ್ ಪಾಂಡ್ಯ, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಜತೆಗಿನ ಸಂಬಂಧಗಳನ್ನು ಬಹುಬೇಗನೆ ಕಡಿದುಕೊಂಡು ಹಳೆಯ ಗೆಳೆಯನ ತೋಳುಗಳಲ್ಲಿ ಮತ್ತೆ ಬಂಧಿಯಾಗಿದ್ದ ದೀಪಿಕಾ ಪಡುಕೋಣೆ ಮತ್ತೆ ಬದಲಾಗಬಹುದು ಎಂಬುದು ನೀತಾ ಮಾತಿನ ಅರ್ಥವೇ? ಇರಲೂ ಬಹುದು. ಅಥವಾ ರಣಬೀರ್ ಕೂಡ ಬದಲಾಗಬಹುದು. ಆತ ಕೂಡ ಈ ಹಿಂದೆ ತನ್ನ ಮೊದಲ ಚಿತ್ರದ ನಾಯಕಿ ಸೋನಮ್ ಕಪೂರ್ ಜತೆ ಎಲ್ಲೆಂದರಲ್ಲಿ ತಿರುಗುತ್ತಿದ್ದ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಮತ್ತೆ ಹಳೆಯ ಗೆಳತಿಯ ಗಾಳಕ್ಕೆ ಸಿಕ್ಕ ಕಾರಣ ಮನಸ್ಸು ಬದಲಾಯಿಸಿದ್ದ. ಹಾಗಾಗಿ ಮತ್ತೆ ಇಬ್ಬರೂ ದೂರವಾಗಿ ಹೊಸತರ ಹುಡುಕಾಟದಲ್ಲಿ ತೊಡಗಿದರೂ ಅಚ್ಚರಿಯಿಲ್ಲ..!

ಇತ್ತೀಚೆಗಷ್ಟೇ ಮಾತಿಗೆ ಸಿಕ್ಕಿದ್ದ ರಿಷಿ ಕಪೂರ್ ಮತ್ತು ನೀತೂ ತಮ್ಮ ಮಗನ ಬಗ್ಗೆ ಆತನ ಖಾಸಗಿ ಜೀವನದ ಬಗ್ಗೆ ಮಾತನಾಡುತ್ತಾ, "ರಣಬೀರ್ ಜೀವನದಲ್ಲಿ ದೀಪಿಕಾ ಮತ್ತೊಬ್ಬಳು ಗೆಳತಿ.. ಅಷ್ಟೇ.. ಅವರಿಬ್ಬರೂ ಎಳೆಯ ಪ್ರಾಯದವರು. ಮದುವೆಗಿನ್ನೂ ಬಹಳ ದೂರವಿದೆ. ಅವರ ಭವಿಷ್ಯದ ದಿನಗಳು ಹೇಗಿವೆಯೆಂದು ಯಾರಿಗೂ ಗೊತ್ತಿಲ್ಲ" ಎಂದು ಹೇಳಿದ್ದರು.

ದೀಪಿಕಾ ಕಿವಿಗೆ ಈ ವಿಚಾರ ಬಿದ್ದರೆ ತಣ್ಣಗೆ ನಡುಗಬಹುದು ಅಂತೀರಾ? ಇಲ್ಲ ಬಿಡಿ, ಅವಳಿಗಾಗಿ ಕಾದು ಕಾದು ಸುಸ್ತಾಗಿರುವ ಯುವರಾಜ್ ಸಿಂಗ್ ಬ್ಯಾಟಿಂಗ್ ಆರಂಭಿಸಿದ್ದಾನೆ. ಮತ್ತೊಮ್ಮೆ ಅರ್ಜಿ ಗುಜರಾಯಿಸಿದರಾಯಿತು ಅಂದುಕೊಳ್ಳಬಹುದು ದೀಪಿಕಾ !
IFMಇದರಲ್ಲಿ ಇನ್ನಷ್ಟು ಓದಿ :