ಸುಶ್ಮಿತಾ ಮತ್ತೆ ನಟಿಸಲು ಸಿದ್ಧ ಆಗಿದ್ದಾರೆ... ಐಶ್ ಜೊತೆ !

ವೆಬ್‌ದುನಿಯಾ| Last Modified ಬುಧವಾರ, 16 ಏಪ್ರಿಲ್ 2014 (09:22 IST)
PR
ನೋ ಪ್ರಾಬ್ಲಂ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕದೆ ಇದ್ರೂ ನೋ ಪ್ರಾಬ್ಲಂ ಎಂದು ಹೇಳಿದ ಸುಶ್ಮಿತಾ ಸೆನ್ ಈಗ ಮತ್ತೊಂದು ಚಿತ್ರದಲ್ಲಿ ನಟಿಸಲು ಸಿದ್ಧ ಆಗಿದ್ದಾರೆ, ಅದೂ ನಾಲ್ಕು ವರ್ಷಗಳ ನಂತರ. ಸುಶ್ಮಿತಾ ಸೆನ್ ಮಾಜಿ ಮಿಸ್ ಯುನಿವರ್ಸ್ ಆಗಿದ್ದಂತಹ ಚೆಲುವೆ. ಈಕೆ ನೋ ಪ್ರಾಬ್ಲಂ ಅನ್ನುವ ಚಿತ್ರದಲ್ಲಿ ಅಭಿನಯಿಸಿದ ಬಳಿಕ ಚಿತ್ರರಂಗದ ಕಡೆ ಕಣ್ಣೆತ್ತಿ ನೋಡಿರಲಿಲ್ಲ.
ಈ ಚಿತ್ರಕಥೆಯೂ ಸುಶ್ ರನ್ನು ಅದೆಷ್ಟು ಪ್ರಭಾವ ಬೀರಿದೆ ಎಂದರೆ, ತಾವೇ ಇದರ ನಿರ್ಮಾಪಕಿ ಆಗಲು ಸಿದ್ಧ ಆಗಿದ್ದಾರೆ. ಈ ಚಿತ್ರದ ರೀಮೇಕ್ ಹಕ್ಕುಗಳನ್ನು ತೆಗೆದುಕೊಂಡು ಹಿಂದಿಯಲ್ಲಿ ಈ ಚಿತ್ರ ನಿರ್ಮಿಸುವ ಯೋಜನೆ ಹೊಂದಿದ್ದಾರೆ ಈಕೆ.


ಇದರಲ್ಲಿ ಇನ್ನಷ್ಟು ಓದಿ :