ತಮಿಳು ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ಲಿಂಗು ಸ್ವಾಮಿ. ಅವರು ಸೋನಾಕ್ಷಿಯನ್ನು ಕರೆತಂದಿದ್ದಾರೆ ದಕ್ಷಿಣ ಭಾರತಕ್ಕೆ . ಸೂರ್ಯ ಹೊಸದನ್ನು ನೀಡಲು ಸದಾ ಹಾತೊರೆಯುವಂತಹ ಕಲಾವಿದ. ಆಟ ನಟಿಸಿದ ಚಿತ್ರಗಳು ಅಪಾರ ಸಂಖ್ಯೆಯ ಪ್ರೇಕ್ಷಕರ ಮನ ಗೆದ್ದಿದೆ. ಈಗ ಲಿಂಗು ಸ್ವಾಮಿ ಅವರ ನಿರ್ದೇಶನದ ಚಿತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಅವರ ಹೊಸ ಚಿತ್ರದಲ್ಲಿ ಸೂರ್ಯ ಅವರ ಜೊತೆ ದಬಾಂಗ್ ಸುಂದರಿ ಸೋನಾಕ್ಷಿ ಸಿಂಹ ಐಟಂ ನಂಬರ್ ನಲ್ಲಿ ಕಾಣಿಸಿ ಕೊಳ್ಳುತ್ತಿದ್ದಾಳೆ. ಇದನ್ನು ಮಾಧ್ಯಮಗಳಿಗೆ ಚಿತ್ರ ನಿರ್ಮಾಪಕ/ ನಿರ್ದೇಶಕ ಲಿಂಗು ಸ್ವಾಮಿ ಹೇಳಿದ್ದಾರೆ.