ಶಿಲ್ಪಾ ಶೆಟ್ಟಿಗೆ ಮತ್ತೊಂದು ಮಗು ಬೇಕಂತೆ?

ಮುಂಬೈ| ವೆಬ್‌ದುನಿಯಾ|
PR
ಚಿಕ್ಕವಳಿದ್ದಾಗ ಶಿಕ್ಷಕಿ ಪ್ರತಿನಿತ್ಯ ಕ್ಲಾಸಿನಲ್ಲಿ ನಿಲ್ಲಿಸಿಕೊಂಡು ಮುಂದೆ ದೊಡ್ಡವಳಾದ ಬಳಿಕ ನೀನೆನು ಆಗುತ್ತಿ ಎಂದು ಕೇಳುತ್ತಿದ್ದರು. ಇದೇ ಪ್ರಶ್ನೆ ಬಂಧುಗಳು ಸುತ್ತಮುತ್ತಲಿನ ಮಂದಿಯೂ ಕೇಳುತ್ತಿದ್ದರು. ಆಗೆಲ್ಲಾ ನನಗೆ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ. ಆದರೆ ಈಗ ಆ ಪ್ರಶ್ನೆಗೆ ಉತ್ತರ ತಿಳಿದಿದೆ. ಈಗ ಯಾರಾದರೂ ಅದೇ ಪ್ರಶ್ನೆ ಕೇಳಿದರೆ ನನಗೆ ಮತ್ತೆ ಮಗು ಬೇಕು ಅಂತ ಹೇಳುತ್ತೀನಿ ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಕಳೆದ ವರ್ಷ ಒಂದು ಮಗುವಿಗೆ ಇದೀಗ ಮತ್ತೆ ಮತ್ತೊಂದು ಮಗು ಬೇಕು ಎಂದೆನಿಸಿದೆಯಂತೆ. 38 ವರ್ಷ ತುಂಬಿರುವ ಶಿಲ್ಪಾ ವಿಹಾನ್ಗೆ ತಾಯಿ ಆಗಿದ್ದಾರೆ. ರಾಜ್ ಕುಂದ್ರಾ ಈ ಮಗುವಿನ ತಂದೆ. ಆತನಿಗೆ ಅದಾಗಲೇ ಮದುವೆ ಆಗಿ ಡೈವೋರ್ಸ್ ಕೂಡಾ ಆಗಿರುವುದು ಹಳೇ ಸಂಗತಿ.


ಇದರಲ್ಲಿ ಇನ್ನಷ್ಟು ಓದಿ :