ಮಾಧುರಿ ಚಿತ್ರದ ಎಲ್ಲ ಟಿಕೆಟ್ ಬುಕ್

IFM
ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರ ಮಹಾನ್ ಅಭಿಮಾನಿಗಳಲ್ಲಿ ಒಬ್ಬರಾದ, ಮಾಧುರಿ ಫಿದಾ ಹುಸೇನ್ ಎಂದೇ ನಾಮಾಂಕಿತರಾದ ಭಾರತದ ಚಿತ್ರಕಲಾವಿದ ಎಂ.ಎಫ್. ಹುಸೇನ್ "ಗಜಗಾಮಿನಿ"ಯನ್ನು ಭಿನ್ನ ವಿಧಾನದಲ್ಲಿ ಸ್ವಾಗತಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಮಾಧುರಿಯ ಚಿತ್ರ ಆಜಾ ನಾಚ್ಲೆ ಸಂಯುಕ್ತ ಅರಬ್ ಗಣರಾಜ್ಯದಲ್ಲಿ ಗುರುವಾರ ಬಿಡುಗಡೆಯಾಗುತ್ತಿದ್ದು, ಚಿತ್ರದ ಇಡೀ ಪ್ರದರ್ಶನಕ್ಕೆ ಎಲ್ಲ ಟಿಕೆಟ್‌ಗಳನ್ನು ಹುಸೇನ್ ಬುಕ್ ಮಾಡಿದ್ದಾರೆ. ಹುಸೇನ್ ಅವರ ವಿಶೇಷ ಅತಿಥಿಗಳು ಚಿತ್ರವನ್ನು ವೀಕ್ಷಿಸುವುದಲ್ಲದೇ ಕಲಾವಿದರ ಸಹಿಯನ್ನು "ಇನ್‌ವೈಟ್"(ಚಿತ್ರದ ಟಿಕೆಟ್) ಮತ್ತು ಮಾಧುರಿಯ ರೇಖಾಚಿತ್ರವನ್ನು ಸ್ವೀಕರಿಸಲಿದ್ದಾರೆ.

ದುಬೈ| ಇಳಯರಾಜ| Last Modified ಬುಧವಾರ, 28 ನವೆಂಬರ್ 2007 (19:16 IST)
ಮಾಧುರಿಯ ವರ್ಣಚಿತ್ರಗಳನ್ನು ಕೂಡ ಸಿನೆಮಾ ಹಾಲ್‌ನಲ್ಲಿ ಪ್ರದರ್ಶಿಸುವುದಾಗಿ ಹುಸೇನ್ ಹೇಳಿದ್ದಾರೆ. ಅವರ ಹಿಟ್ ಚಿತ್ರಗಳ ಆಧಾರದ ಮೇಲೆ ಈ ವರ್ಣಚಿತ್ರಗಳನ್ನು ರಚಿಸಿರುವುದಾಗಿ ಅವರು ನುಡಿದಿದ್ದಾರೆ. ಭಾರತೀಯ ನಟಿಯ ಪ್ರತಿಭೆ, ಸೌಂದರ್ಯವನ್ನು ಶ್ಲಾಘಿಸಿದ ಅವರು ಭಾರತೀಯ ಹೆಣ್ಣಿನ ಸೌಂದರ್ಯದ ಸಾಕ್ಷಾತ್ ಸ್ವರೂಪ ಎಂದು ಬಣ್ಣಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :