ದಸ್ ಕಹಾನಿಯಲ್ಲಿ ಗುಲ್ಜಾರ್ ಕವಿತೆ

IFM
ಸಂಜಯ್ ಗುಪ್ತಾ ಅವರು ತಮ್ಮ ಪರಿತ್ಯಕ್ತ ಪತ್ನಿ ಅನುನನ್ನು ಯಾವ ಬೆಲೆ ತೆತ್ತಾದರೂ ಹಿಂದಕ್ಕೆ ಕರೆಸಿಕೊಳ್ಳುವ ಬಯಕೆ. ತಮಗೆ ಗೊತ್ತಿರುವ ಮಾರ್ಗಗಳನ್ನೆಲ್ಲ ಶೋಧಿಸಿದ ನಿರ್ಮಾಪಕರು ದಸ್ ಕಹಾನಿಯನ್‌ನ 3 ಸಂಪುಟಗಳ ಸೌಂಡ್‌ಟ್ರಾಕನ್ನು ತಮ್ಮ ಪತ್ನಿಗೆ ಅರ್ಪಿಸಿದರು.

ಅದರಲ್ಲಿರುವ ಕವಿತೆಯನ್ನು ಕೇಳಿ ತಮ್ಮ ಹೃದಯದ ಕರೆಯೆಂದು ಪತ್ನಿ ಭಾವಿಸಬಹುದೆಂದು ಆಶಿಸಿದರು. ಇದು ಅನುಗೆ ನನ್ನ ಹೃದಯದ ಹತಾಶ ಕಟ್ಟಕಡೆಯ ಕರೆ ಎಂದು ಗುಪ್ತಾ ಹೇಳಿದರು.

ಸಂಜಯ್ ಲೀಲಾ ಬನ್ಸಾಲಿಯ ಸವಾರಿಯ ಬಳಿಕ ದಸ್ ಕಹಾನಿಯಾನ್ ಸೌಂಡ್‌ಟ್ರಾಕ್ ಹಿಂದಿ ಚಿತ್ರದ ಸಂಗೀತವನ್ನು ಹಾಡು ಮತ್ತು ನೃತ್ಯ ಸೂತ್ರದಿಂದ ದೂರಸರಿಯುವಂತೆ ಮಾಡಿದೆ. ಸಂಜಯ್ ಗುಪ್ತಾ ಚಿತ್ರಸಂಗೀತವನ್ನು ಇನ್ನೊಂದು ಮಟ್ಟಕ್ಕೆ ಒಯ್ದಿದ್ದಾರೆ. ಚಿತ್ರಗಳಲ್ಲಿ ಸ್ಥಿರವಾದ ಧ್ವನಿಯಿಂದ ನಿರ್ಮಾಪಕ ಬೇಸತ್ತಿದ್ದಾರೆ. ದಸ್ ಕಹಾನಿಯನ್‌ನಲ್ಲಿ ಹೊಸ ಧ್ವನಿಯೊಂದಿಗೆ ಹೊಸ ಸ್ವರೂಪದ ಪ್ರೆಸೆಂಟೇಶನ್ ಗುಪ್ತಾ ನೀಡಿದ್ದಾರೆ.

ನಾನು ಗುಲ್ಜಾರ್ ಸಾಬ್ ಜತೆ ಸಹಯೋಗ ಹೊಂದಲು ಸದಾ ಬಯಸಿದ್ದೆ. ನಾನು ಅವರ ದೊಡ್ಡ ಅಭಿಮಾನಿ, ಕವಿತೆಯನ್ನು ಸಂಗೀತದಲ್ಲಿ ಸಂಯೋಜಿಸಲು ಇದು ನನಗೊಂದು ಅವಕಾಶವಾಗಿದೆ.

ಇಳಯರಾಜ| Last Modified ಮಂಗಳವಾರ, 30 ಅಕ್ಟೋಬರ್ 2007 (18:47 IST)
ಎಲ್ಲ ರೀತಿಯ ಐಟಂ ಸಾಂಗ್‌ಗಳು ಮತ್ತಿತರ ಗೀತೆಗಳಿಂದ ನಮಗೆ ಬೇಸರವಾದಾಗ ಕವಿತೆಗಳು ಚಿತ್ರದ ಸಂಗೀತಕ್ಕೆ ಮೆರುಗು ನೀಡುತ್ತವೆ. ಆದ್ದರಿಂದ ಈ ಆಲ್ಬಮ್‌ಗಳನ್ನು ತಮ್ಮ ಪತ್ನಿಗೆ ಅರ್ಪಿಸಿದ್ದಾಗಿ ಅವರು ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :