PR ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸದ್ಯ ಮಿಂಚುತ್ತಿರುವ ನಟಿಯರಲ್ಲಿ ತಾಪಸಿಯೂ ಒಬ್ಬರು. ಒಂದಾದ ಬಳಿಕ ಒಂದರಂತೆ ಅತ್ಯುತ್ತಮ ಅವಕಾಶಗಳೇ ಇದನ್ನು ಪ್ರೂವ್ ಮಾಡುತ್ತಿವೆ. ಈಗ ಹಿಂದಿ ಚಿತ್ರರಂಗದಿಂದ ಆಕೆಗೆ ಬುಲಾವ್ ಬಂದಿದೆ. ಈಕೆ ನಟಿಸಿದ ಮೊದಲ ಹಿಂದಿ ಚಿತ್ರ ಅದೇಕೋ ಹೆಸರು ಮಾಡಲಿಲ್ಲ. ಆದರೆ ಈಗ ವಿಕ್ಕಿ ಡೋನರ್ ನಿರ್ಮಾಪಕ ಅಮಿತ್ ರಾಯ್ ಚಿತ್ರವೊಂದನ್ನು ತಯಾರಿಸುತ್ತಿದ್ದಾರೆ. ಆ ಚಿತ್ರಕ್ಕೆ ತಾಪಸಿಯೇ ಹೆಚ್ಚು ಸೂಕ್ತವಾದ ನಟಿ ಎಂಬುದು ಅವರ ಅಭಿಮತ.