PR ಬಾಲಿವುಡ್ನಲ್ಲಿ ತನ್ನದೇ ಆದ ಭಿನ್ನ ರುಚಿಗಳಿಂದ, ನಟನೆಯಿಂದ ಮನೆಗೆದ್ದವರು ಅಮೀರ್ಖಾನ್. ಅದೇ ಕಾರಣಕ್ಕೆ ಅವರಿಗೆ ಮಿಸ್ಟರ್ ಪರ್ಫೆಕ್ಟ್ ಎಂಬ ಹೆಸರು ಬಂದಿದ್ದು. ತಾರೇ ಜಮೀನ್ ಪರ್, ತ್ರೀ ಈಡಿಯೆಟ್ಸ್ ಚಿತ್ರಗಳ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದನ್ನೂ ಹೇಳಿಕೊಟ್ಟವರಿವರು. ಈಗ ಮತ್ತೆ ಕಿರುತೆರೆಗೆ ಮರಳಿರುವ ಅಮೀರ್ ಸ್ಟಾರ್ ಪ್ಲಸ್ನಲ್ಲಿ ಸತ್ಯಮೇಯ ಜಯತೇ ಸೀಸನ್ 2 ಕಾರ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತಿದ್ದಾರೆ.ಸತ್ಯಮೇಯ ಜಯತೇ ಮೊದಲ ಸೀಸನ್ಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.