PR ವಿದ್ಯಾಬಾಲನ್ ಹೆಸರು ಕೇಳಿದಾಕ್ಷಣ ಡರ್ಟಿ ಪಿಕ್ಚರ್ ನೆನಪಾಗುವುದು ಅತಿ ಸಹಜ ಸಂಗತಿ. ಬಾಲಿವುಡ್ನಲ್ಲಿ ಹಾಟ್ ಪಾತ್ರ ನಿರ್ವಹಿಸುವ ಮೂಲಕ ಹೊಸ ಹವಾ ಎಬ್ಬಿಸಿದ್ದ ಈಕೆ ಇದೀಗ ದ್ರೌಪತಿಯಾಗಿದ್ದಾರಂತೆ. ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿರುವ ಮಹಾಭಾರತ ಆನಿಮೇಶನ್ ಚಿತ್ರದಲ್ಲಿ ವಿದ್ಯಾಬಾಲನ್ ದ್ರೌಪತಿ ಪಾತ್ರಕ್ಕೆ ಕಂಠದಾನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.ಅಮಿತಾಬ್ ಬಚ್ಚನ್, ಸನ್ನಿ ಡಿಯೋಲ್ ಸೇರಿದಂತೆ ಬಾಲಿವುಡ್ನ ಖ್ಯಾತನಾಮರು ಈಗಾಗಲೇ ಚಿತ್ರಕ್ಕೆ ಕಂಠದಾನ ಮಾಡಲು ಒಪ್ಪಿಕೊಂಡಿದ್ದು ಆ ಸಾಲಿಗೆ