PR ಗಾಳಿ ಸುದ್ದಿಗೇನು ಬರವಿಲ್ಲ ಚಿತ್ರ ರಂಗದಲ್ಲಿ. ಆದರೆ ಅದು ನಿಜ ಆಗ್ಲಿ ಅಂತ ಕಾಯೋರು ಸಹಿತ ತುಂಬಾ ಮಂದಿ ಇದ್ದಾರೆ. ಬಾಲಿವುಡ್ನ ಅಪರೂಪದ ಸುಂದರಿ , ಕರಾವಳಿ ಚೆಲುವೆ ,ಅಭಿಷೇಕ್ ಬಚ್ಚನ್ ಅರ್ಧಾಂಗಿ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸೊಸೆ ಐಶ್ವರ್ಯ ರಾಯ್ ಬಚ್ಚನ್ ಕನ್ನಡ ಸಿನಿಮಾದ ಮನಮೋಹಕದಲ್ಲಿ ನಟಿಸುತ್ತಿದ್ದಾರೆ. ಇದು ಈಗ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಹರಡಿರುವ ಸುದ್ದಿ ಆಗಿದೆ ಎಂದೇ ಹೇಳ ಬಹುದು.