PRPR ಬಾಲಿವುಡ್ನ ಎವರ್ಗ್ರೀನ್ ಬ್ಯೂಟಿ ನಟಿ ಶ್ರೀದೇವಿ. ಅವರ ನಟನಾ ಕೌಶಲ್ಯವನ್ನು ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ನೀವು ನೋಡೇ ಇರುತ್ತೀರಿ. ಈಗ ಆ ಬ್ಯೂಟಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರಂತೆ. ಆಕೆಗೆ ಆಗಸ್ಟ್ 13ಕ್ಕೆ ಐವತ್ತು ವರ್ಷ ತುಂಬಲಿದೆಯಂತೆ. ಈ ಖುಷಿಯನ್ನು ಗ್ರಾಂಡ್ ಸೆಲೆಬ್ರೇಷನ್ ಮಾಡಬೇಕು ಎಂದು ಪತಿ ಬೋನಿ ಕಪೂರ್ ಆಲೋಚಿಸಿದ್ದರಂತೆ. ಆದರೆ ಆ ಪ್ಲಾನ್ ಈಗ ತಲೆಕೆಳಗಾಗಿದ್ದು ಆಕೆ ಗ್ರಾಂಡ್ ಹುಟ್ಟುಹಬ್ಬದ ಸೆಲೆಬ್ರೇಷನ್ ಕ್ಯಾನ್ಸಲ್ ಆಗುವುದು ಖಚಿತವಾಗಿದೆ.