PRPR ಹೆಸರಾಂತ ನಿರ್ದೇಶಕ ಬಾಲು ಮಹೇಂದ್ರ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅಸ್ವಸ್ಥತೆಯಿಂದ ಚೆನ್ನೈನ ವಿಜಯಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. 74 ವರ್ಷ ವಯಸ್ಸಿನ ಹಿರಿಯ ನಿರ್ದೇಶಕ ಭಾರತದ ಸಿನೆಮಾದ ಪ್ರವರ್ತಕರಲ್ಲಿ ಒಬ್ಬರಾಗಿದ್ದು, ಚಿತ್ರಕಥೆಗಾರ, ಸಂಕಲನಕಾರ ಮತ್ತು ಛಾಯಾಚಿತ್ರಗ್ರಾಹಕರಾಗಿದ್ದರು. .ಬಾಲು ಮಹೇಂದ್ರ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1974ರಲ್ಲಿ ನೆಲ್ಲು ಚಿತ್ರದ ಸಿನೇಮಾಟೋಗ್ರಾಫರ್ ವೃತ್ತಿಜೀವನ ಆರಂಭಿಸಿದ ಅವರು ಕನ್ನಡದ ಕೋಕಿಲ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾದರು.