PR 2006ರಿಂದ 2012ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದ ಶ್ಯಾಮ್ ಬೆನಗಲ್ ಟಿವಿ ಧಾರಾವಾಹಿಯ ಜನಕನೂ ಹೌದು. ಇದೀಗ ಅವರೊಂದು ಹೊಸ ಸಾಹಸಕ್ಕೆ ಕೈಹಾಕಿದ್ದು ಭಾರತದ ಸಂವಿಧಾನ ರಚಿಸಿದ ಬಗೆಯನ್ನು ಧಾರಾವಾಹಿಯ ಮೂಲಕ ಜನರಿಗೆ ತಿಳಿಯಪಡಿಸಲು ಮುಂದಾಗಿದ್ದಾರೆ. ಬೆನಗಲ್ ರಾಜ್ಯ ಸಭೆಯ ಸದಸ್ಯರಾಗಿ ಕೆಲಸ ಮಾಡಿದ ಅನುಭವವಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಾನು ಸಂವಿಧಾನ ರಚನೆಯಾದ ಪ್ರಕ್ರಿಯೆಯನ್ನು ಚಿತ್ರವನ್ನಾಗಿ ಮಾಡಿದೆ. ಸಂವಿಧಾನ ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು