ಸೋಲನ್ನೇ ಗೆಲುವಾಗಿ ಪರಿಗಣಿಸುವ ಬಾಲಿವುಡ್ ಹುಡುಗ ನಿಖಿಲ್ ಅಡ್ವಾನಿ ಬಗ್ಗೆ ನೀವೆಲ್ಲಾ ಕೇಳಿರಬಹುದು. ಇಷ್ಟಕ್ಕೂ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸಹ ನಿರ್ದೇಶಕರಾಗಿ. ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್ ಚಿತ್ರಗಳು ಸೂಪರ್ಹಿಟ್ ಆಗುತ್ತಲೇ ಇವರೂ ತಮ್ಮ ಬೇಡಿಕೆ ಹೆಚ್ಚಿಸಿಕೊಂಡರು. ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಇವರು ನಿರ್ದೇಶಿಸಿದ ಚಿತ್ರ ಕಲ್ ಹೋ ನಾ ಹೋ ಸೂಪರ್ ಹಿಟ್ ಆಗುತ್ತಲೇ ನಿಖಿಲ್ ಅವರ ಲಕ್ ಸಾಕಷ್ಟು ಎತ್ತರಕ್ಕೆ ಹೋಗಿತ್ತು.