IFMIFM ಟಾಲಿವುಡ್ ಮೆಗಾಸ್ಟಾರ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಚಿರಂಜೀವಿ ಅವರ ಮಗ ರಾಮ್ ಚರಣ್ ತೇಜ ಬಾಲಿವುಡ್ಗೆ ಎಂಟ್ರಿ ಕೊಡಲು ವೇದಿಕೆ ಸಿದ್ದವಾಗಿದೆ. ಅವರ ಮೊದಲ ಬಾಲಿವುಡ್ ಚಿತ್ರ ಜಂಝೀರ್ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಮ್ಚರಣ್ ಕಟ್ಟುಮಸ್ತಾದ ದೇಹಕ್ಕಾಗಿ ಆಸ್ಟ್ರೇಲಿಯಾ ಫಿಟ್ನೆಸ್ ತರಬೇತುದಾರರಿಂದ ಪಾಠ ಹೇಳಿಸಿಕೊಂಡಿದ್ದಾರಂತೆ. ದಿನಕ್ಕೆ ಮೂರರಿಂದ ನಾಲ್ಕು ಗಂಟೆ ಕಠಿಣ ಅಭ್ಯಾಸ ಮಾಡಿದ್ದರಿಂದ ಚಿತ್ರದಲ್ಲಿ ಇಷ್ಟು ಸುಂದರವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆಯಂತೆ.ಶೂಟಿಂಗ್