PRPR ಮುಂಬೈ: ತೆಲುಗಿನ ಮಗಧೀರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಪ್ರಖ್ಯಾತ ನಟ ಶ್ರೀಹರಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರಿಗೆ 49 ವರ್ಷ ವಯಸ್ಸಾಗಿತ್ತು.ಮಗಧೀರ ಚಿತ್ರ ಸೇರಿ ಹಲವು ತೆಲುಗು, ತಮಿಳು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.ಶ್ರೀಹರಿ ಡಿಸ್ಕೋ ಶಾಂತಿ ಅವರ ಪತಿ ಮತ್ತು ಪ್ರಕಾಶ್ ರೈ ಅವರ ಸೋದರ ಸಂಬಂಧಿ ಕೂಡ ಆಗಿದ್ದಾರೆ. ಕನ್ನಡದ ಕೋಕೋ, ಓ ಪ್ರೇಮವೇ ಚಿತ್ರಗಳಲ್ಲಿ ಅವರು ನಟಿಸಿದ್ದರು. ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.