ಡಿ.20ರಂದು ಅಮೀರ್ ಖಾನ್ ಖಳನಾಯಕನಾಗಿ ನಟಿಸಿರುವ ಧೂಮ್ 3 ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರ ಚೆನ್ನೈ ಎಕ್ಸ್ಪ್ರೆಸ್ ದಾಖಲೆ ಮುರಿಯಬಲ್ಲುದೇ ಎಂಬ ಪ್ರಶ್ನೆಗೆ ಅಮೀರ್ ನೀಡಿದ ಉತ್ತರ ತೀರಾ ವಿಭಿನ್ನವಾಗಿತ್ತು. ಅಭಿಮಾನಿಗಳನ್ನು ಮೆಚ್ಚಿಸುವುದು, ಪೂರ್ಣಪ್ರಮಾಣದ ಮನರಂಜನೆ ನೀಡುವುದು, ಸಾಧ್ಯವಾದರೆ ಹೊಸ ಸಂಗತಿಗಳನ್ನು ಹೇಳುವುದು ಇವಿಷ್ಟನ್ನು ಮಾತ್ರ ಪಾತ್ರ ಆಯ್ಕೆ ಮಾಡುವಾಗ ಪರಿಗಣಿಸುತ್ತೇನೆ, ಉಳಿದಂತೆ ಬಾಕ್ಸ್ಆಫೀಸ್ ಗಳಿಕೆ, ದಾಖಲೆ, ಎಷ್ಟು ದಿನ ಓಡಿದವು ಎಂಬುದೆಲ್ಲಾ ತೀರಾ ಗೌಣ ಎಂದಿದ್ದಾರೆ ಅಮೀರ್ ಖಾನ್.ಬಾಕ್ಸ್