PTI ಮುದ್ದಾದ ಲವ್ಲೀ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕತ್ರಿನಾ ಕೈಫ್ ಇದೀಗ ಬಿಕಿನಿ ತೊಡಲು ಸಿದ್ಧತೆ ನಡೆಸುತ್ತಿದ್ದಾರಂತೆ. ಈಗ ಮತ್ತೆ ಬಿಕಿನಿಯತ್ತ ಮನಸ್ಸು ಮಾಡಿ ತೊಡಲು ರೆಡಿ ಆಗುತ್ತಿದ್ದಾರೆ.ಅಮೀರ್ಖಾನ್ ನಾಯಕನಾಗಿರುವ ಧೂಮ್ 3 ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಈ ಚಿತ್ರದಲ್ಲಿರುವ ಆಕರ್ಷಣೆಗಳು ಹಲವಾರು. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸುತ್ತಿರುವ ಚಿತ್ರದ ನಿರ್ಮಾಪಕರು ಆದಿತ್ಯಾ ಚೋಪ್ರಾ.ಮೊದಲೇ ಬಳುಕುವ ಬಳ್ಳಿಯಂತಿರುವ ಕತ್ರಿನಾ ಚಿತ್ರದ ಪಾತ್ರಕ್ಕಾಗಿ 5 ಕೆಜಿ ತೂಕ ಇಳಿಸಿಕೊಂಡಿದ್ದಾರೆ.