PTI ನಟನೆ ನಮಗೆ ಬೇರೊಂದು ಜಗತ್ತಿನಲ್ಲಿ ಬದುಕುವುದನ್ನು ಕಲಿಸುತ್ತದೆ ಎಂಬುದು ನಟಿ ವಿದ್ಯಾಬಾಲನ್ ಅನುಭವದ ಮಾತು. ಅಭಿನಯದ ಮೂಲಕ ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳಲು ಸಾಧ್ಯವಿಲ್ಲ. ಬೇರೊಂದು ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವ ಈ ಪ್ರಕ್ರಿಯೆಯಿಂದ ನನಗೆ ರೋಮಾಂಚನವಾಗಿದೆ ಎಂದು ವಿದ್ಯಾ ತಾತ್ವಿಕವಾಗಿ ಮಾತನಾಡಿದ್ದಾರೆ.ರಾಜ್ಕುಮಾರ್ ಗುಪ್ತಾ ನಿರ್ದೇಶನದ ಘನ್ಚಕ್ಕರ್ ಚಿತ್ರದಲ್ಲಿ ಅಸಹಜ ಉಡುಪು ಧರಿಸುವ ಪಂಜಾಬಿ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ ವಿದ್ಯಾ ತಮ್ಮ ಸ್ವಭಾವಕ್ಕೆ ಹೊಂದುವ ಪಾತ್ರಗಳನ್ನು ಆಯ್ದುಕೊಂಡರೆ ಅಲ್ಲಿ ಸಿಗುವ