PTI ಹೆಚ್ಚು ಸಂಭಾವನೆ ಪಡೆಯುವ ನಟನಾಗುವುದು ಬೇಕಿಲ್ಲ. ಏನೇ ಮಾಡಿದರೂ ಅದರಿಂದ ಬದುಕಿಗೆ ಖುಷಿ ಸಿಗುವಂತಿರಬೇಕು ಎಂದಿದ್ದಾರೆ ಪದ್ಮಶ್ರೀ ಪ್ರಶಸ್ತಿ ವಿಜೇತ ಇರ್ಫಾನ್ ಖಾನ್. ನಾನು ಚಿತ್ರಕತೆಯನ್ನು ನೋಡುತ್ತೇನೆ ಮತ್ತು ಅದಕ್ಕೆ ನಾನೇನು ಕೊಡುಗೆ ನೀಡಬಹುದು ಎಂಬುದನ್ನು ಯೋಚಿಸುತ್ತೇನೆ, ಅಭಿಮಾನಿಗಳ ನೆನಪಿನಲ್ಲಿ ಉಳಿಯುವಂತಹ ಚಿತ್ರಗಳನ್ನೇ ಕೊಡಲು ಬಯಸುತ್ತೇನೆ ಎಂದಿದ್ದಾರೆ. ವಾಣಿಜ್ಯ ಸಿನೆಮಾಗಳ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದ್ದರೂ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಚ್ಯೂಸಿಯಾಗಿಲ್ಲವಂತೆ.ಇಂತಹುದೇ ಚಿತ್ರ ಮಾಡಬೇಕು ಎಂಬ ಹಠ ನನಗಿಲ್ಲ.