PR ಜಾನ್ ಅಬ್ರಹಾಂ ಹಾಗೂ ನರ್ಗಿಸ್ ಫಕ್ರಿ ಅಭಿನಯದ ಮದ್ರಾಸ್ ಕೆಫೆ ಚೆನ್ನೈ ಹೊರತುಪಡಿಸಿ ದೇಶದೆಲ್ಲೆಡೆ ಬಿಡುಗಡೆಯಾಗಿದೆ. ಬಿಡುಗಡೆಯಾದ ಆರಂಭದ ದಿನದಲ್ಲಿ ಭರ್ಜರಿ ಓಪನಿಂಗ್ ಸಿಗದಿದ್ದರೂ ಪರವಾಗಿಲ್ಲ ಎನ್ನುವ ಮಟ್ಟಿನ ವ್ಯಾಪಾರ ನಡೆಸಿತ್ತು. ಆದರೆ ಮೊದಲೆರಡು ದಿನಗಳ ಅಂತ್ಯದ ಬಳಿಕ ಚಿತ್ರದ ಆದಾಯ ಹೆಚ್ಚಿದ್ದು ದೇಶಿ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡುಕೊಂಡಿದೆ. ವಿಮರ್ಶಕರಿಂದ ಉತ್ತಮ ಹೊಗಳಿಕೆ ಸಿಕ್ಕಿದ ಹಿನ್ನೆಲೆಯಲ್ಲಿ ಶನಿವಾರದ ಅಂತ್ಯಕ್ಕೆ ಚಿತ್ರಮಂದಿರದತ್ತ ಜನ ದಾಂಗುಡಿ ಇಡಲು ಆರಂಭಿಸಿದ್ದಾರೆ. ರಾಜಕೀಯ