WDWD ಸೂರಜ್ ಬರ್ಜಾತ್ಯಾ ಸಿನೆಮಾ ಮಾಡುತ್ತಿದ್ದಾರೆ. ಅವರಿಗೆ ಸಲ್ಮಾನ್ ಖಾನ್ ಅಂದರೆ ಅದೇನೋ ಪ್ರೀತಿ. ತಮ್ಮ ಹೊಸ ಚಿತ್ರಕ್ಕೂ ಸಲ್ಲೂ ಮಿಯಾನನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಕತ್ರಿನಾ ಮತ್ತು ಅನುಷ್ಕಾ ಶರ್ಮಾ ಪೈಕಿ ಯಾರಾದರೊಬ್ಬರು ನಾಯಕಿ ಆಗುತ್ತಾರೆ ಎಂಬ ಸುದ್ದಿ ಹರಡಿದ್ದು ಸುಳ್ಳಾಗಿದೆ. ಫ್ಯಾಮಿಲಿ ಡ್ರಾಮಾಗಳನ್ನೇ ಆಯ್ದುಕೊಳ್ಳುವ ಸೂರಜ್ಗೆ ಪಕ್ಕದ್ಮನೆ ಇಮೇಜಿನ ಹುಡುಗಿಯರೇ ಬೇಕು. ಹೀಗಾಗಿ ಚಿತ್ರಕ್ಕೆ ಪರಿಣಿತಿ ಚೋಪ್ರಾ ಇಲ್ಲವೇ ಇಲಿಯಾನಾ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.