PRPR ಬೀಚ್ ಎಂದರೆ ಪ್ರಾಣ ಬಿಡುವ ಪ್ರಿಯಾಂಕಾ ಚೋಪ್ರಾ ಗೋವಾದ ಕಡಲ ತೀರದಲ್ಲೊಂದು ಮನೆ ಖರೀದಿಸಿದ್ದಾರೆ. ಉತ್ತರ ಗೋವಾದ ಬಾಗಾ ಬೀಚ್ ಬಳಿ ಅವರು ಮನೆ ಖರೀದಿಸಿದ್ದನ್ನು ಬಹಿರಂಗಪಡಿಸಿರಲಿಲ್ಲ ಅಷ್ಟೇ.ಹಾಗಂತ ಪ್ರಿಯಾಂಕಾ ಗೋವಾದಲ್ಲಿ ಸೆಟ್ಲ್ ಆಗುತ್ತಿಲ್ಲ. ಯಾವಾಗಾದರೊಮ್ಮೆ ಗೋವಾಗೆ ಬಂದಾಗ ಉಳಿದುಕೊಳ್ಳಲೆಂದೇ ಈ ಮನೆಯಂತೆ. ಬಿಡುವಿನ ವೇಳೆಯನ್ನು ಬೀಚ್ ಸಮೀಪ ಕಳೆಯುವುದೆಂದರೆ ಅವರಿಗೆ ಬಲು ಪ್ರಿಯವಂತೆ. ಇದು ರಜಾ ದಿನಗಳನ್ನು ಕಳೆಯಲೆಂದೇ ಕೊಂಡ ಮನೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.